Publish Date: Sat, 29 Aug 2020 (10:06 IST)
Updated Date: Sat, 29 Aug 2020 (10:08 IST)
ಬೆಂಗಳೂರು: ಸ್ಯಾಂಡಲ್ ವುಡ್, ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ವಿಸ್ಕಿ ಬ್ರ್ಯಾಂಡ್ ನ್ನು ಪ್ರಮೋಟ್ ಮಾಡಿ ನೆಟ್ಟಿಗರಿಂದ ಟೀಕೆಗೊಳಗಾಗಿದ್ದಾರೆ.
ಗೆಳೆಯನ ಜತೆ ಗುಂಡಿನ ಪಾರ್ಟಿ ಮಾಡುವ ಫೋಟೋ ಪ್ರಕಟಿಸಿರುವ ಚಂದನ್ ಇದರ ಜತೆಗೆ ಮೆಕ್ ಡೊನಾಲ್ಡ್ ಬ್ರ್ಯಾಂಡ್ ವಿಸ್ಕಿಯ ಬಗ್ಗೆ ಹೊಗಳಿ ಬರೆದಿದ್ದರು.
ಇದನ್ನು ನೋಡಿದ ನೆಟ್ಟಿಗರು ವಿಸ್ಕಿ ಬ್ರ್ಯಾಂಡ್ ನ್ನು ಯಾಕೆ ಪ್ರಮೋಟ್ ಮಾಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇದರ ಬಗ್ಗೆ ಚಂದನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.