Select Your Language

Notifications

webdunia
webdunia
webdunia
webdunia

ಮದುವೆಯೂ ಇಲ್ಲ ಎಂಥದ್ದೂ ಇಲ್ಲ ಎಲ್ಲಾ ಸುಳ್ಳು ಎಂದ ಕಿರುತೆರೆ ನಟ ಚಂದನ್

ಮದುವೆಯೂ ಇಲ್ಲ ಎಂಥದ್ದೂ ಇಲ್ಲ ಎಲ್ಲಾ ಸುಳ್ಳು ಎಂದ ಕಿರುತೆರೆ ನಟ ಚಂದನ್
ಬೆಂಗಳೂರು , ಶುಕ್ರವಾರ, 20 ಮಾರ್ಚ್ 2020 (08:58 IST)
ಬೆಂಗಳೂರು: ಕಿರುತೆರೆಯ ಮೋಸ್ಟ್ ವಾಂಟೆಡ್ ಎಲಿಜಿಬಲ್ ಬ್ಯಾಚುಲರ್ ಚಂದನ್ ಕುಮಾರ್ ತಮ್ಮ ಮದುವೆಯ ಬಗ್ಗೆ ಬಂದ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


ನಟ ಚಂದನ್ ಸದ್ಯದಲ್ಲೇ ಅಮ್ಮ ತೋರಿಸಿದ ಮೈಸೂರು ಮೂಲದ ಹುಡುಗಿಯನ್ನು ಮದುವೆಯಾಗಲಿದ್ದಾರೆ. ಹೀಗಂತ ಅವರೇ ತೆಲುಗು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಚಂದನ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಂದನ್ ಇದೆಲ್ಲಾ ಸುಳ್ಳು ಸುದ್ದಿಗಳು. ಈ ಕೊರೋನಾ ಭಯದ ಕಾಲದಲ್ಲೂ ಕೆಲವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಇದರಲ್ಲೇ ಗೊತ್ತಾಗುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾವೈರಸ್ ನಿಂದ ಮಲಯಾಳಂ ಬಿಗ್ ಬಾಸ್ ರದ್ದು