ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಸೆಲೆಬ್ರಿಟಿಗಳೂ ಹೌಸ್ ಅರೆಸ್ಟ್ ಆಗಿಬಿಟ್ಟಿದ್ದಾರೆ. ಸದಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ-ನಟಿಯರು ಈಗ ಸೋಷಿಯಲ್ ಮೀಡಿಯಾ ಮೂಲಕ ಮನೆಯಲ್ಲೇ ಕೂರಬೇಕಾದ ಸ್ಥಿತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಇದೀಗ ನಟಿ ಹರಿಪ್ರಿಯಾ ಮನೆಯಲ್ಲೇ ಕೂತು ಬೋರ್ ಆಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ಲವಲವಿಕೆಯಿಂದಿರುವ ನಾನು ಈಗ ಮನೆಯಲ್ಲೇ ಕೂರಬೇಕಾದ ಸ್ಥಿತಿ. ನಿಜವಾಗಿಯೂ ಬೋರ್ ಆಗುತ್ತಿದೆ. ಆದರೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಹೀಗಿರದೇ ಬೇರೆ ದಾರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ಇದೇ ಸಂದರ್ಭವನ್ನು ಕ್ರಿಯಾತ್ಮಕ ಕೆಲಸಗಳನ್ನು ಮಾಡಲು ಬಳಸಿ. ಕ್ರಾಫ್ಟ್ ವರ್ಕ್ ಮಾಡಿ. ಮನೆಯಲ್ಲಿರುವ ಕಿರಿಯರಿಗೆ ಹೊಸದನ್ನು ತಿಳಿಸಿಕೊಡಿ. ಮನೆಯ ಸದಸ್ಯರು ಪರಸ್ಪರ ಜತೆಯಾಗಿ ಕಳೆಯಲು ಅವಕಾಶ ಸಿಕ್ಕಂತಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.