ಹಲ್ಲೆ ವಿವಾದದ ಬಳಿಕ ಕುತೂಹಲ ಹುಟ್ಟುಹಾಕಿದ ಚಂದನ್ ಕುಮಾರ್ ಹೊಸ ಪೋಸ್ಟ್

Webdunia
ಸೋಮವಾರ, 1 ಆಗಸ್ಟ್ 2022 (16:05 IST)
ಬೆಂಗಳೂರು: ತೆಲುಗು ಧಾರವಾಹಿ ಸೆಟ್ ನಲ್ಲಿ ನಡೆದಿತ್ತು ಎನ್ನಲಾದ ಹಲ್ಲೆ ವಿಡಿಯೋ ವೈರಲ್ ಆದ ಬಳಿಕ ಇದೀಗ ಕಿರುತೆರೆ ನಟ ಚಂದನ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಪೋಸ್ಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕ್ಯಾಮರಾ ಮ್ಯಾನ್ ಗೆ ಮೊದಲು ಚಂದನ್ ಹಲ್ಲೆ ಮಾಡಿದ್ದರು. ಇದೇ ಕಾರಣಕ್ಕೆ ತಂತ್ರಜ್ಞರು ಅವರ ವಿರುದ್ಧ ತಿರುಗಿಬಿದ್ದಿದ್ದರು ಎನ್ನಲಾಗಿತ್ತು.  ಇದಕ್ಕೆ ಕಾರಣ ತಮ್ಮ ಅಮ್ಮನ ಅನಾರೋಗ್ಯದ ಬಗ್ಗೆ ಇದ್ದ ಚಿಂತೆ. ಇದರಿಂದಾಗಿಯೇ ಅಂದು ಚಂದನ್ ತಾಳ್ಮೆ ಕಳೆದುಕೊಂಡಿದ್ದರು ಎನ್ನಲಾಗಿತ್ತು.

ಅದಕ್ಕೆ ಪೂರಕವೆಂಬಂತೆ ಇದೀಗ ವಿವಾದಗಳ ಬಳಿಕ ಚಂದನ್ ಅಮ್ಮ ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದಾಗ ಅವರ ಜೊತೆ ತೆಗೆಸಿಕೊಂಡ ಫೋಟೋವೊಂದನ್ನು ಪ್ರಕಟಿಸಿದ್ದು, ‘ನಿಮ್ಮ ಜೊತೆ ನಾನಿರಬೇಕಿತ್ತು ಅಮ್ಮ. ಬೇಗ ಗುಣಮುಖರಾಗಿ ಬನ್ನಿ. ಲವ್ ಯೂ ಸೋ ಮಚ್’ ಎಂದು ಪೋಸ್ಟ್ ಪ್ರಕಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ನಿಮಗೆ ಗೌರವ ಕೊಡದ ಧಾರವಾಹಿಯಲ್ಲಿ ಮುಂದುವರಿಯಬೇಡಿ ಎಂದು ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ಅವರ ಕೊನೆಯ ಸಿನಿಮಾ ಜಾಗತಿಕವಾಗಿ ಗಳಿಸಿದ್ದೆಷ್ಟು ಗೊತ್ತಾ

ಹೆಸರಿಡದ ಸಿನಿಮಾದ ಸಾಹಸ ಚಿತ್ರೀಕರಣ ವೇಳೆ ಅವಘಡ: ಟಾಲಿವುಡ್‌ ನಟ ಬಾಲಯ್ಯಗೆ ಶಸ್ತ್ರಚಿಕಿತ್ಸೆ

ನಟಿ ಕಾಜೋಲ್ ಗೆ ಸಾರ್ವಜನಿಕವಾಗಿ ಮುಜುಗರ: ಖಾಸಗಿ ಭಾಗ ಸ್ಪರ್ಶಿಸಿದ ವ್ಯಕ್ತಿ, ನಟಿಯ ರಿಯಾಕ್ಷನ್ ನೋಡಿ

ನಾನು ಮನೆಯಿಂದಲೇ ಊಟ ಕಳುಹಿಸುತ್ತೇನೆ, ಸಹೋದರ ಸೋನಮ್ ಉಪವಾಸ ಸತ್ಯಾಗ್ರಹ ಕೈಬಿಡಿ: ಸಲ್ಮಾನ್ ಖಾನ್ ಮನವಿ

ತೆರೆಗೆ ಅಪ್ಪಲಿಸಿದ ಜನ ನಾಯಗನ್: ಮುಖ್ಯಮಂತ್ರಿಯನ್ನು ಬೆಳ್ಳಿತೆರೆಯಲ್ಲಿ ಕಂಡು ಅಭಿಮಾನಿಗಳು ಫುಟ್‌ಖುಷ್‌

ಮುಂದಿನ ಸುದ್ದಿ
Show comments