Select Your Language

Notifications

webdunia
webdunia
webdunia
webdunia

ನವರಾತ್ರಿ ಮುಗಿಯುವದರೊಳಗೆ ದರ್ಶನ್‌ಗೆ ಜಾಮೀನು, ವಿಜಯಲಕ್ಷ್ಮೀ ಭೇಟಿ ಹಿಂದಿದೆ ಪ್ರಮುಖ ಕಾರಣ

Renukaswamy  Case

Sampriya

ಬಳ್ಳಾರಿ , ಸೋಮವಾರ, 7 ಅಕ್ಟೋಬರ್ 2024 (16:03 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ2 ಆರೋಪಿ ನಟ ದರ್ಶನ್‌ರನ್ನು ಪತ್ನಿ ವಿಜಯಲಕ್ಷ್ಮೀ ಇಂದು ಭೇಟಿಯಾಗಿದ್ದಾರೆ.  ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ ಆರೋಗ್ಯ ವಿಚಾರಿಸಿದ ಪತ್ನಿ ಜಾಮೀನಿನ ಸುಳಿವು ನೀಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಗ್ಗೆ ಬಳ್ಳಾರಿಗೆ ವಿಜಯಲಕ್ಷ್ಮಿ ಜತೆಗೆ ಆಪ್ತರಾದ ಸುಶಂತ್ ನಾಯ್ಡು, ಅನುಷಾ ಶೆಟ್ಟಿ, ರೋಹಿತ್ ಗ್ರೇಸ್ ಮರ್ಸಿ ಸಹ ದರ್ಶನ್‌ ಭೇಟಿಯಾಗಿದ್ದಾರೆ.  ಸುಶಾಂತ್ ನಾಯ್ಡು ಅವರು ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್‌ಗೆ ಬೇಕಾದ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದಿದ್ದಾರೆ. ದಸರಾ ಮುಗಿಯವುದರೊಳಗೆ ಜಾಮೀನು ಸಿಗುವ ಮುನ್ಸೂಚನೆಯನ್ನು ವಿಜಯಲಕ್ಷ್ಮಿ ನೀಡಿದ್ದಾರೆಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಲವು ಬಾರಿ ಮುಂದೂಡಲಾಗಿದೆ. ಅಕ್ಟೋಬರ್‌ 4ರಂದು ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್ ಅವರು ಸುದೀರ್ಘವಾಗಿ ವಾದ ಮಂಡಿಸಿದ್ದು, ಬೆಂಗಳೂರಿನ 57ನೇ ಸಿಸಿಎಸ್‌ ಕೋರ್ಟ್‌ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದೆ. ಅದರಂತೆ ನಾಳೆ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯ ಮೇಲೆ ಅತ್ಯಾಚಾರ ಪ್ರಕರಣ: ಮಾಲಿವುಡ್‌ನ ನಟ ಸಿದ್ದಿಕ್‌ ವಿಚಾರಣೆ