ಖ್ಯಾತ ಚಿತ್ರನಟನ ಮನೆಗೆ ಬಾಂಬ್ ಬೆದರಿಕೆ

ಭಾನುವಾರ, 5 ಜುಲೈ 2020 (19:10 IST)
ದಕ್ಷಿಣ ಭಾರತದ ಖ್ಯಾತ ಚಿತ್ರನಟನ ಮನೆ ಮೇಲೆ ಬಾಂಬ್ ಹಾಕಲಾಗಿದೆ ಎಂಬ ಸುದ್ದಿ ಹರಿದಾಡತೊಡಗಿತ್ತು.

ಬಾಂಬ್ ಹಾಕಿರುವುದಾಗಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತೀವ್ರ ಆತಂಕ ಸೃಷ್ಟಿ ಮಾಡಿದ್ದನು.

ಕಾರ್ಯಾಚರಣೆಗೆ ಇಳಿದ ಪೊಲೀಸರು ಬಾಂಬ್ ಪತ್ತೆಗೆ ಮುಂದಾದರು. ಆದರೆ ಬಾಂಬ್ ಪತ್ತೆಯಾಗಲಿಲ್ಲ. ನಟ ತಲಪತಿ ವಿಜಯ್ ಮನೆಗೆ ಬಾಂಬ್ ಹಾಕಿದ್ದಾಗಿ ಹೇಳಿದ ಯುವಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಆದರೆ ವಿಲ್ಲುಪುರಂ ಜಿಲ್ಲೆಯ ಮಾನಸಿಕ ಯುವಕನೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವುದು ಗೊತ್ತಾಗಿದೆ.

ಮಾನಸಿಕ ಯುವಕನ ವೈದ್ಯಕೀಯ ವರದಿ ಪರಿಶೀಲಿಸಿ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುಶಾಂತ್ ಸಿಂಗ್ ತಂದೆಯ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ