Select Your Language

Notifications

webdunia
webdunia
webdunia
webdunia

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸೂಸೈಡ್‌ ಕೇಸ್‌: ನಟಿ ರಿಯಾ ಚಕ್ರವರ್ತಿಗೆ ಸಿಬಿಐ ಕ್ಲೀನ್‌ಚಿಟ್

Bollywood actor Sushant Singh Rajput, actress Rhea Chakraborty, CBI investigation

Sampriya

ಮುಂಬೈ , ಶುಕ್ರವಾರ, 24 ಅಕ್ಟೋಬರ್ 2025 (14:45 IST)
Photo Credit X
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾನಸ್ಪದ ಸಾವು ಪ್ರಕರಣದಲ್ಲಿ ಅವರ ಆಪ್ತೆ, ನಟಿ ರಿಯಾ ಚಕ್ರವರ್ತಿ ಅವರಿಗೆ ಬಿಗ್‌ ರಿಲೀಫ್‌ ದೊರಕಿದೆ.

2020ರ ಜೂನ್ 14ರಂದು ಸುಶಾಂತ್ ಸಿಂಗ್ ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ಆಯಾಮದಲ್ಲಿ ಕಳೆದ 5ವರ್ಷಗಳಿಂದ ಸಿಬಿಐ ತನಿಖೆ ನಡೆಯುತ್ತಿದೆ. ಇದೀಗ ಅವರ ಆತ್ಮಹತ್ಯೆ ಪ್ರಕರಣ ದಲ್ಲಿ ನಟಿ ರಿಯಾ ಚಕ್ರವರ್ತಿ ವಿರುದ್ಧ ವಿವಿಧ ಆರೋಪಗಳು ಕೇಳಿ ಬಂದಿತ್ತು. ಇದೀಗ ಸಿಬಿಐ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್ ನೀಡಿದೆ.

ಸುಶಾಂತ್ ಅವರು ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್‌ನ ಬೆಡ್ ರೂಮ್ ನಲ್ಲಿ ನೇಣು ಬಿಗಿದು ಕೊಂಡಿರುವ ಸ್ಥಿತಿಯಲ್ಲಿದ್ದರು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರೂ ಅವರಿಗೆ ಇದರಲ್ಲಿ ಯಾವುದೇ ತರನಾಗಿ ಕೊಲೆ ಅಂಶ ಪತ್ತೆಯಾಗಿರಲಿಲ್ಲ. 

ಪ್ರಕರಣ ಸಂಬಂಧ ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ಅವರು ರಿಯಾ ಚಕ್ರವರ್ತಿ ಮೇಲೆ ಆರೋಪ ಹೊರಿಸಿದ್ದು ರಿಯಾ ಚಕ್ರವರ್ತಿ ಮತ್ತು ಕುಟುಂಬದ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಅದೇ ರೀತಿ ಸುಶಾಂತ್ ಅವರ ಸಹೋದರಿಯರ ವಿರುದ್ಧ ಮುಂಬೈನಲ್ಲಿ ರಿಯಾ ಚಕ್ರವರ್ತಿ ಪ್ರಕರಣ ದಾಖಲಿಸಿದ್ದರು. ಎರಡೂ ಪ್ರಕರಣದ ವಿಚಾರಣೆ ನಡೆಸಿ ಸಿಬಿಐ ವರದಿ ನೀಡಿದದ್ದು ರಿಯಾ ಅವರಿಗೆ ಕ್ಲೀನ್ ಚೀಟ್ ನೀಡಿದೆ.

ಸುಶಾಂತ್ ಸಿಂಗ್ ಅವರು ಅದ್ಭುತ ಅಭಿನಯದಿಂದ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ನಟರಾಗಿದ್ದರು. ಪಿ.ಕೆ., ಚಿಚೋರೆ, ಎಂ. ಎಸ್. ಧೋನಿ ಅನ್ ಟೋಲ್ಡ್ ಸ್ಟೋರಿ ಇತರ ಸಿನಿಮಾ ಹಾಗೂ ಪವಿತ್ರ ರಿಶ್ತಾ, ಝಲಕ್ ದಿಖ್ಲಾಜಾ, ಕೈ ಪೋ ಚೆ ಇನ್ನು ಅನೇಕ ಟಿವಿ ಶೋ ಮೂಲಕ ಅವರು ಖ್ಯಾತಿ ಪಡೆದಿದ್ದರು.  

ರಿಯಾ ಮತ್ತು ಸುಶಾಂತ್ ಏಪ್ರಿಲ್ 2019ರಿಂದ ಜೂನ್ 2020 ರವರೆಗೆ ಲಿವ್-ಇನ್ ರಿಲೇಶನ್ಶಿಪ್ ನಲ್ಲಿದ್ದರು. ಈ ಸಂದರ್ಭದಲ್ಲಿ ಸುಶಾಂತ್, ರಿಯಾಗಾಗಿ ಸಾಕಷ್ಟು ಹಣ ಖರ್ಚು ಮಾಡಿ‌ದ್ದರು. ಜೊತೆಗೆ ತಮ್ಮ ಆಪ್ತರಿಗೂ ಆಕೆಯನ್ನು ಪರಿಚಯಿಸಿ ತಮ್ಮ ಕುಟುಂಬದ ಒಂದು ಭಾಗವೆಂದೆ ಹೇಳುತ್ತಿದ್ದರಂತೆ. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿ, ರಿಯಾ ಹಣಕಾಸಿನ ವಿಚಾರದಲ್ಲಿ ಮೋಸ ಮಾಡಿದ್ದಾಳೆ, ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ. ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಸುಶಾಂತ್ ತಂದೆ ರಿಯಾ ವಿರುದ್ಧ ಕೇಸ್ ದಾಖಲಿಸಿದ್ದರು.

ಸುಶಾಂತ್ ಅವರು ತಮ್ಮ ಇಚ್ಛೆಯಂತೆ ರಿಯಾಗಾಗಿ ಹಣ ಖರ್ಚು ಮಾಡಿದ್ದು ಅದು ಕಳ್ಳತನ ವಾಗಲಾರದು. ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳಿಗೆ ಯಾವ ಸಾಕ್ಷಿಯೂ ಲಭ್ಯವಾಗಿಲ್ಲ ಹೀಗಾಗಿ ಸಿಬಿಐ ಈ ಆರೋಪ ತಳ್ಳಿಹಾಕಿದೆ. ಜೊತೆಗೆ ಆತ್ಮಹತ್ಯೆಗೆ ಪ್ರಚೋದಿಸುವಂತದ್ದು ಏನೂ ನಡೆದಿಲ್ಲ ಎಂದು ಸಿಬಿಐ ವರದಿಯಲ್ಲಿ ತಿಳಿಸಿದೆ.

ಸುಶಾಂತ್ ಸಿಂಗ್ ಜೂನ್ 14 ರಂದು ಸಾವನ್ನಪ್ಪಿದ್ದು ರಿಯಾ ಮತ್ತು ಶೋವಿಕ್ ಜೂನ್ 8 ರಂದೇ ಸುಶಾಂತ್ ಬಾಂದ್ರಾ ಫ್ಲ್ಯಾಟ್ ತೊರೆದಿದ್ದರು ಎಂದು ವರದಿಯಲ್ಲಿದೆ. ಅಂದರೆ ಅವರ ಸಾವಿಗೂ 6 ದಿನಗಳ ಮೊದಲು ರಿಯಾ ಅಪಾರ್ಟ್ಮೆಂಟ್‌ನಿಂದ ಹೊರಟಿದ್ದರು. ಜೊತೆಗೆ ಯಾವುದೇ ಹಣಕಾಸಿನ ಅವ್ಯವಹಾರ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌