Select Your Language

Notifications

webdunia
webdunia
webdunia
webdunia

Bigg Boss 11: ₹50 ಲಕ್ಷ ಬಹುಮಾನದಲ್ಲಿ ವಿನ್ನರ್‌ ಹನುಮಂತಗೆ ಸಿಗುವ ಹಣ ಇಷ್ಟೆನಾ

Bigg Boss 11: ₹50 ಲಕ್ಷ ಬಹುಮಾನದಲ್ಲಿ ವಿನ್ನರ್‌ ಹನುಮಂತಗೆ ಸಿಗುವ ಹಣ ಇಷ್ಟೆನಾ

Sampriya

ಬೆಂಗಳೂರು , ಸೋಮವಾರ, 27 ಜನವರಿ 2025 (14:23 IST)
Photo Courtesy X
ಬೆಂಗಳೂರು: ಕನ್ನಡ ಬಿಗ್‌ಬಾಸ್‌ ಸೀಸನ್‌ 11ರ ಚಾಂಪಿಯನ್‌ ಆದ ಹನುಮಂತ ಅವರಿಗೆ ₹ 50 ಲಕ್ಷ ನಗದು ಬಹುಮಾನ ಸಿಕ್ಕಿದೆ. ಅವರಿಗೆ ₹50 ಲಕ್ಷ ಬಹುಮಾನ ಸಿಕ್ಕರೂ ಅದರಲ್ಲಿ ಬರೋಬ್ಬರಿ ಶೇ 30ರಷ್ಟು ಕಡಿತವಾಗಲಿದೆ.

ನಗದು ಬಹುಮಾನ ಮೊತ್ತಕ್ಕೆ ಶೇ 30 ಗಿಫ್ಟ್‌ ಟ್ಯಾಕ್ಸ್‌ ವಿಧಿಸಲಾಗುತ್ತದೆ. ಹೀಗಾಗಿ ಸಿಗುವ ಬಹುಮಾನದಲ್ಲಿ ಶೇ 30 ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಾದ ಹನುಮಂತ ಅವರಿಗೆ ನೀಡುತ್ತಾರೆ.

ಬಿಗ್ ಬಾಸ್ 11ನೇ ಆವೃತ್ತಿಗೆ ಗೆದ್ದ ಹನುಮಂತನಿಗೆ 50 ಲಕ್ಷ ರೂಪಾಯಿ ಚೆಕ್ ವಿತರಿಸಲಾಗಿದೆ. ಆದರೆ ಬಹುಮಾನ, ಲಾಟರಿ, ಲಕ್ಕಿಡಿಪ್ ಸೇರಿದಂತೆ ಯಾವುದೇ ಬಹುಮಾನ ರೂಪದಲ್ಲಿ ನಿಮಗೆ ಹಣ ಬಂದರೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಬಂದಿರುವ ಹಣದಲ್ಲಿ ಶೇಕಡಾ 30 ರಷ್ಟು ತೆರಿಗೆ ರೂಪದಲ್ಲಿ ಪಾವತಿಸಬೇಕು. 10,000 ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬಂದರೂ ಈ ತೆರಿಗೆ ಅನ್ವಿಯಸಲಿದೆ. ಹೀಗಾಗಿ ಹನುಮಂತ ಸದ್ಯ ₹ 50 ಲಕ್ಷ ರೂಪಾಯಿ ಬಹುಮಾನದ ಮೊತ್ತದಲ್ಲಿ ಶೇಕಡಾ 30 ರಷ್ಟು ತೆರಿಗೆ ಪಾವತಿಸಬೇಕು.

ಕಾಯ್ದೆಯ ಸೆಕ್ಷನ್ 194ಬಿ ಪ್ರಕಾರ ಈ ಗೆಲುವಿನ ಮೇಲೆ ಶೇ 30ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ವಿಜೇತರು 1% ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ಸಹ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ತೆರಿಗೆ ದರ ಶೇ 31.2ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು ಶೇ10 ಲಕ್ಷಗಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ ಶೇ10 ಶುಲ್ಕ ಅನ್ವಯಿಸಲಾಗುತ್ತದೆ.

ಬಿಗ್‌ ಬಾಸ್‌ ಶೋದಲ್ಲಿ ಬಹುಮಾನ ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ ಆಗಿರುತ್ತದೆ. ಯಾಕೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತದೆ. ಎಲ್ಲೂ ಹೋದರೂ ಬಿಗ್‌ ಬಾಸ್‌ ಸ್ಪರ್ಧಿ ಎಂದೇ ಕರೆದು ಗೌರವಿಸುತ್ತಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಬಗ್ಗೆ ಹಾಡಿಗೆ ನೃತ್ಯ ಮಾಡಿದ ಹುಡುಗನಿಗೆ ಕಿಚ್ಚ ಸುದೀಪ್ ಕೊಟ್ರು ಬೆಲೆ ಕಟ್ಟಲಾಗದ ಗಿಫ್ಟ್