Webdunia - Bharat's app for daily news and videos

Install App

ಲಾಯರ್ ಜಗದೀಶ್ ಮೇಲೆ ಹಲ್ಲೆ: ವಕೀಲ್ ಸಾಬ್ ಹೊಡಿ ಮಗ ಹೊಡಿ ಮಗ ಅಂತ ಬಿತ್ತು ಗೂಸಾ (Video)

Krishnaveni K
ಶನಿವಾರ, 25 ಜನವರಿ 2025 (10:39 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಮತ್ತೆ ಹಲ್ಲೆ ನಡೆಸಲಾಗಿದೆ. ಇದು ಎರಡು ದಿನಗಳ ಅಂತರದಲ್ಲಿ ಎರಡನೇ ಬಾರಿ ನಡೆಯುತ್ತಿರುವ ಹಲ್ಲೆಯಾಗಿದೆ.

ಲಾಯರ್ ಜಗದೀಶ್ ಬಿಗ್ ಬಾಸ್ ನಲ್ಲಿದ್ದಾಗಲೂ ಬಾಯಿಗೆ ಬಂದ ಹಾಗೆ ಹೇಳಿಕೆಗಳನ್ನು ನೀಡುತ್ತಾ ಕೊನೆಗೆ ಅಶಿಸ್ತಿನ ವರ್ತನೆ ಕಾರಣಕ್ಕೆ ಮನೆಯಿಂದಲೇ ಹೊರಹಾಕಲಾಗಿತ್ತು. ಇದಾದ ಬಳಿಕ ದರ್ಶನ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

ಮೊನ್ನೆ ತಮ್ಮ ಮನೆ ಮುಂದೆ ಅಣ್ಣಮ್ಮ ಕೂರಿಸಿ ರಸ್ತೆ ಬ್ಲಾಕ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಕ್ಕೆ ಕೆಲವರ ಗುಂಪು ಅವರ ಮೇಲೆ ಹಲ್ಲೆ ನಡೆಸಿತ್ತು. ಆ ಸಂದರ್ಭದಲ್ಲಿ ಲೈವ್ ಬಂದು ಇದೆಲ್ಲಾ ದರ್ಶನ್ ಅಭಿಮಾನಿಗಳದ್ದೇ ಕೆಲಸ. ದರ್ಶನ್ ದುಡ್ಡು ಕೊಟ್ಟು ನನ್ನ ಹೊಡೆಸ್ತೀಯೇನೋ ಎಂದು ಆವಾಜ್ ಹಾಕಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ನಿನ್ನೆ  ರಾತ್ರಿ ಮತ್ತೊಮ್ಮೆ ಜಗದೀಶ್ ಮೇಲೆ ಹಲ್ಲೆಯಾಗಿದೆ. ಮೊನ್ನೆ ದಾಳಿ ಬಳಿಕ ದರ್ಶನ್ ಅಭಿಮಾನಿಗಳು ತಾಕತ್ತಿದ್ದರೆ ವಿಮೆ ಮಾಡಿಸಿಕೊಂಡು ನನ್ನ ಬಳಿ ಬನ್ನಿ ಎಂದಿದ್ದರು. ನಿನ್ನೆ ರಾತ್ರಿ ಕೆಲವರು ಗುಂಪುಕಟ್ಟಿಕೊಂಡು ಜಗದೀಶ್ ಕಾರಿನಲ್ಲಿ ತೆರಳುತ್ತಿದ್ದಾಗ ಬಂದಿದ್ದು ಕೈಗೆ ಸಿಕ್ಕ  ವಸ್ತುಗಳಿಂದ ಕಾರಿಗೆ ಹೊಡೆದು ಅವರ ಮುಖಕ್ಕೆ ಪಂಚ್ ಮಾಡಿದ್ದಾರೆ.

ಘಟನೆಯಲ್ಲಿ ಜಗದೀಶ್ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ತಡೆಯುವ ಪ್ರಯತ್ನ ನಡೆಸಿದ್ದಾರೆ. ಎಲ್ಲಾ ಘಟನೆ ಬಳಿಕ ಲೈವ್ ಬಂದು ತಮ್ಮ ಮೇಲಾದ ಹಲ್ಲೆ ಬಗ್ಗೆ ಮಾತನಾಡಿದ್ದಾರೆ. ಅವರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ಮುಂದಿನ ಸುದ್ದಿ
Show comments