Webdunia - Bharat's app for daily news and videos

Install App

ಸಿನಿಮಾ ರಂಗ ಎಂದ ಮೇಲೆ ಇದೆಲ್ಲಾ ಮಾಮೂಲು: ಮೀಟೂ ಸಭೆಯಲ್ಲಿ ಭಾವನಾ ರಾಮಣ್ಣ ಗರಂ

Krishnaveni K
ಸೋಮವಾರ, 16 ಸೆಪ್ಟಂಬರ್ 2024 (16:19 IST)
Photo Credit: Facebook
ಬೆಂಗಳೂರು: ಸಿನಿಮಾ ರಂಗ ಎಂದ ಮೇಲೆ ಇದೆಲ್ಲಾ ಮಾಮೂಲು. ಅದನ್ನೇ ದೊಡ್ಡದು ಮಾಡಿಕೊಳ್ಳುವುದು ಬೇಡ.. ಹೀಗಂತ ನಟಿ ಭಾವನಾ ರಾಮಣ್ಣ ಮೀಟೂ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೇರಳದಂತೆ ಸ್ಯಾಂಡಲ್ ವುಡ್ ನಲ್ಲೂ ಸಮಿತಿ ರಚಿಸಿ ಲೈಂಗಿಕ ಕಿರುಕುಳದ ಬಗ್ಗೆ ತನಿಖೆ ನಡೆಸಬೇಕು ಎಂದು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು, ಕಲಾವಿದರು ಸಭೆ ಸೇರಿದ್ದರು. ಈ ವೇಳೆ ನಟಿ ಭಾವನಾ ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೀಟೂ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಒಂದು ಸಮಿತಿ ರಚಿಸಬೇಕೇ ಬೇಡವೇ ಎಂಬ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ. ಕೆಲವು ಕಲಾವಿದರೇ ಅಂತಹ ಕಮಿಟಿಯ ಅಗತ್ಯವಿಲ್ಲ ಎಂದು ಧ್ವನಿಯೆತ್ತಿದ್ದಾರೆ. ಆದರೆ ನಟಿ ಅನಿತಾ ಭಟ್ ಮುಂತಾದವರು ನಮಗೇ ಇಂತಹ ಅನುಭವಗಳಾಗಿವೆ. ಅಂತಹ ಪರಿಸ್ಥಿತಿ ಎದುರಿಸಿಲ್ಲ ಎಂಬ ಮಾತ್ರಕ್ಕೆ ಅಂತಹ ಘಟನೆಗಳೇ ಆಗಿಲ್ಲ ಎಂದು ಅರ್ಥವಲ್ಲ ಎಂದಿದ್ದಾರೆ.

ಆದರೆ ನಟಿ ಭಾವನಾ ರಾಮಣ್ಣ, ಸ್ಯಾಂಡಲ್ ವುಡ್ ಗೆ ಅಂತಹ ಕಮಿಟಿಯ ಅಗತ್ಯವಿಲ್ಲ. ಹೆಣ್ಣು ಅಂದಾಗ ಹಲವು ಸಮಸ್ಯೆಗಳು ಬರುವುದು ಸಹಜ. ಇಂಡಸ್ಟ್ರಿ ಎಂದ ಮೇಲೆ ಅದೆಲ್ಲಾ ಇದ್ದೇ ಇರುತ್ತದೆ. ಒಂದು ವೇಳೆ ಕನ್ನಡ ಚಿತ್ರರಂಗದಲ್ಲೂ ಅಂತಹ ಕೆಟ್ಟ ವಾತಾವರಣವಿದೆ ಎಂದರೆ ಅಲ್ಲಿ ಕೆಲಸ ಮಾಡಲು ಹೋಗಬೇಡಿ. ಹೆಣ್ಣು ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ವಾಣಿಜ್ಯ ಮಂಡಳಿಯಿದೆ. ಅದು ಬಿಟ್ಟು ಅದಕ್ಕೇ ಪ್ರತ್ಯೇಕ ಸಮಿತಿ, ಸಂಘದ ಅಗತ್ಯವಿಲ್ಲ’ ಎಂದು ಭಾವನಾ ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ