Webdunia - Bharat's app for daily news and videos

Install App

ಮಲಯಾಳಂ ಚಿತ್ರರಂಗದ ಲೈಂಗಿಕ ಕಿರುಕುಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಜಾಕಿ ಭಾವನಾ ಮೆನನ್

Krishnaveni K
ಸೋಮವಾರ, 26 ಆಗಸ್ಟ್ 2024 (11:00 IST)
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಈಗ ನಟಿ ಭಾವನಾ ಮೆನನ್ ಪರೋಕ್ಷವಾಗಿ ಧ್ವನಿಯೆತ್ತಿದ್ದಾರೆ.

ಭಾವನಾ ಮೆನನ್ ಗೆ ಈ ಹಿಂದೆ ಯಾವ ರೀತಿ ದೌರ್ಜನ್ಯವಾಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇರುವ ಸಂಗತಿ. ಇದೀಗ ಹೇಮ ಸಮಿತಿ ವರದಿ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ದೊಡ್ಡ ಕೋಲಾಹಲವೆದ್ದಿದೆ. ಅಮ್ಮ ಸಂಘಟನೆಯ ಕಾರ್ಯದರ್ಶಿ, ನಟ ಸಿದ್ದಿಖ್, ಖ್ಯಾತ ನಿರ್ದೇಶಕ ರಂಜಿತ್ ವಿರುದ್ಧ ಆರೋಪ ಕೇಳಿಬಂದಿದ್ದು ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ ಇನ್ನಷ್ಟು ಹೆಸರುಗಳು ಬಹಿರಂಗವಾಗುವ ಸಾಧ್ಯತೆಯಿದೆ.

ಇದರ ನಡುವೆ ನಟಿ ಭಾವನಾ ಮೆನನ್ ಇದೀಗ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪರೋಕ್ಷವಾಗಿ ಧ್ವನಿಯೆತ್ತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನುಡಿ ಸಾಲೊಂದನ್ನು ಪೋಸ್ಟ್ ಮಾಡಿರುವ ಭಾವನಾ ಪರೋಕ್ಷವಾಗಿ ಇದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

‘ಎಲ್ಲದಕ್ಕಿಂತ ಮೇಲಾಗಿ, ಇನ್ನೊಬ್ಬರಿಗಾದ ಅನ್ಯಾಯದ ಬಗ್ಗೆ ಸಹತಾಪವಿರಲಿ ಮತ್ತು ಅದರ ಬಗ್ಗೆ ಧ್ವನಿಯೆತ್ತುವ ಧೈರ್ಯ ನಿಮ್ಮದಾಗಿರಲಿ’ ಎಂಬ ಅರ್ಥ ಬರುವ ಸಾಲೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ಹಂಚಿಕೊಂಡ ಭಾವನಾ ಕಾಮೆಂಟ್ ಸೆಕ್ಷನ್ ಮ್ಯೂಟ್ ಮಾಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ತಾನು ನಿಜಜೀವನದಲ್ಲೂ ಹಿರೋಯಿನ್‌ ಎಂದು ಡಿ ಬಾಸ್‌ ಅಭಿಮಾನಿಗಳ ಕಾಲೆಳೆದು, ಮತ್ತೊಂದು ಸವಾಲು ಹಾಕಿದ ರಮ್ಯಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಮುಂದಿನ ಸುದ್ದಿ