Webdunia - Bharat's app for daily news and videos

Install App

ಮೋದಿ ಸಂಸತ್ ಗೆ ನಮಸ್ಕರಿಸಿ ಅದನ್ನೇ ಬದಲಿಸಿದ, ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿ ಅದನ್ನೇ ಬದಲಿಸ್ತಾನೆ: ಹಂಸಲೇಖ

Krishnaveni K
ಸೋಮವಾರ, 26 ಆಗಸ್ಟ್ 2024 (10:32 IST)
Photo Credit: Facebook
ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕಳೆದ ಬಾರಿ ಸಂಸತ್ ಗೆ ನಮಸ್ಕರಿಸಿ ಸಂಸತ್ ನ್ನೇ ಬದಲಾಯಿಸಿದ, ಈ ಬಾರಿ ಪ್ರಧಾನಿಯಾದಾಗ ಸಂವಿಧಾನಕ್ಕೆ ನಮಸ್ಕರಿಸಿದ್ದ. ಅದನ್ನೇ ಬದಲಾಯಿಸ್ತಾನೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ. ಮೋದಿಯವರು ಮೊದಲು ಪ್ರಧಾನಿಯಾದಾಗ ಸಂಸತ್ ಭವನದ ಮೆಟ್ಟಿಲಿಗೆ ನಮಸ್ಕರಿಸಿದ್ದು ನೋಡಿ ಭಾವುಕನಾಗಿ ಎಂಥಾ ಸಂಸ್ಕಾರ ಎಂದುಕೊಂಡೆ. ಆದರೆ ಮರುದಿನ ನನ್ನ ರೆಕಾರ್ಡಿಂಗ್ ಸ್ಟುಡಿಯೋಗೆ ಹೋದಾಗ ಕೇರಳ ಮೂಲದ ಅಶ್ಫಕ್ ಎಂದು ಸೌಂಡ್ ಇಂಜಿನಿಯರ್ ನನಗೆ ನಿಜ ದರ್ಶನ ಮಾಡಿದ ಎಂದಿದ್ದಾರೆ.

ಕೇರಳದವರು ಎಷ್ಟು ಬುದ್ಧಿವಂತರು ನೋಡಿ. ಮರುದಿನ ಸ್ಟುಡಿಯೋಗೆ ಹೋಗಿ ಅಶ್ಫಕ್ ಗೆ ಹೇಳಿದೆ, ನೋಡು ನಿನ್ನೆ ಮೋದಿಯವರು ಸಂಸತ್ ನ ಮೆಟ್ಟಿಲಿಗೆ ನಮಸ್ಕಾರ ಮಾಡಿದ್ದು ನೋಡಿದೆಯಾ ಎಂದು ಕೇಳಿದೆ. ಆದರೆ ಅವನು ಕೈ ಮೇಲೆತ್ತಿ ಎಲ್ಲಾ ನಾಟಕ ಎಂಬಂತೆ ಸನ್ನೆ ಮಾಡಿದ. ಕೆಲವು ಸಮಯ ಕಳೆದ ಮೇಲೆ ಮೋದಿ ಆ ಸಂಸತ್ ನ್ನೇ ಬದಲಾಯಿಸಿದ.

ಈಗ ಮೊನ್ನೆ ಪ್ರಧಾನಿಯಾದಾಗ ಸಂವಿಧಾನಕ್ಕೆ ನಮಸ್ಕರಿಸಿದ್ದ. ಆಗ ಅಶ್ಫಕ್ ನನಗೆ ಕರೆ ಮಾಡಿ, ನೋಡಿ ಸರ್ ಮೋದಿ ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ ಎಂದ. ಅಂದರೆ ಈ ಬಾರಿ ಸಂವಿಧಾನವನ್ನೇ ಬದಲಾಯಿಸ್ತಾನೆ ಎಂದು ಹಂಸಲೇಖ ಲೇವಡಿ ಮಾಡಿದ್ದಾರೆ.  ನಾವು ಕನ್ನಡಿಗರು ಎಲ್ಲವನ್ನೂ ಭಾವನಾತ್ಮಕವಾಗಿ ಯೋಚಿಸುತ್ತೇವೆ. ಆದರೆ ಕೇರಳದವರು ಎಷ್ಟು ಬುದ್ಧಿವಂತರು ನೋಡಿ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ ಆವತ್ತೇ ಅವನು ನಿಜ ಹೇಳಿದ್ದ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments