Select Your Language

Notifications

webdunia
webdunia
webdunia
webdunia

ಮಲಯಾಳಂ ಚಿತ್ರರಂಗದ ಲೈಂಗಿಕ ಕಿರುಕುಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಜಾಕಿ ಭಾವನಾ ಮೆನನ್

Bhavna menon

Krishnaveni K

ಕೊಚ್ಚಿ , ಸೋಮವಾರ, 26 ಆಗಸ್ಟ್ 2024 (11:00 IST)
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಈಗ ನಟಿ ಭಾವನಾ ಮೆನನ್ ಪರೋಕ್ಷವಾಗಿ ಧ್ವನಿಯೆತ್ತಿದ್ದಾರೆ.

ಭಾವನಾ ಮೆನನ್ ಗೆ ಈ ಹಿಂದೆ ಯಾವ ರೀತಿ ದೌರ್ಜನ್ಯವಾಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇರುವ ಸಂಗತಿ. ಇದೀಗ ಹೇಮ ಸಮಿತಿ ವರದಿ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ದೊಡ್ಡ ಕೋಲಾಹಲವೆದ್ದಿದೆ. ಅಮ್ಮ ಸಂಘಟನೆಯ ಕಾರ್ಯದರ್ಶಿ, ನಟ ಸಿದ್ದಿಖ್, ಖ್ಯಾತ ನಿರ್ದೇಶಕ ರಂಜಿತ್ ವಿರುದ್ಧ ಆರೋಪ ಕೇಳಿಬಂದಿದ್ದು ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ ಇನ್ನಷ್ಟು ಹೆಸರುಗಳು ಬಹಿರಂಗವಾಗುವ ಸಾಧ್ಯತೆಯಿದೆ.

ಇದರ ನಡುವೆ ನಟಿ ಭಾವನಾ ಮೆನನ್ ಇದೀಗ ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪರೋಕ್ಷವಾಗಿ ಧ್ವನಿಯೆತ್ತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನುಡಿ ಸಾಲೊಂದನ್ನು ಪೋಸ್ಟ್ ಮಾಡಿರುವ ಭಾವನಾ ಪರೋಕ್ಷವಾಗಿ ಇದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

‘ಎಲ್ಲದಕ್ಕಿಂತ ಮೇಲಾಗಿ, ಇನ್ನೊಬ್ಬರಿಗಾದ ಅನ್ಯಾಯದ ಬಗ್ಗೆ ಸಹತಾಪವಿರಲಿ ಮತ್ತು ಅದರ ಬಗ್ಗೆ ಧ್ವನಿಯೆತ್ತುವ ಧೈರ್ಯ ನಿಮ್ಮದಾಗಿರಲಿ’ ಎಂಬ ಅರ್ಥ ಬರುವ ಸಾಲೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ಹಂಚಿಕೊಂಡ ಭಾವನಾ ಕಾಮೆಂಟ್ ಸೆಕ್ಷನ್ ಮ್ಯೂಟ್ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸಂಸತ್ ಗೆ ನಮಸ್ಕರಿಸಿ ಅದನ್ನೇ ಬದಲಿಸಿದ, ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿ ಅದನ್ನೇ ಬದಲಿಸ್ತಾನೆ: ಹಂಸಲೇಖ