ಬಿಡುಗಡೆಗೂ ಮುನ್ನವೇ ಗೆಲುವಿನ ಬಾವುಟ ನೆಟ್ಟ ನಾರಾಯಣ!

Webdunia
ಗುರುವಾರ, 26 ಡಿಸೆಂಬರ್ 2019 (13:56 IST)
ಈಗ ಎಲ್ಲಿ ನೋಡಿದರಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗೆಗಿನ ವಿಚಾರಗಳೇ ಚರ್ಚೆಗೀಡಾಗುತ್ತಿವೆ. ಕಳೆದ ಬಾರಿ ಇದೇ ಹೊತ್ತಿನಲ್ಲಿ ಸೃಷ್ಟಿಯಾಗಿದ್ದ ಕೆಜಿಎಫ್ ಕ್ರೇಜನ್ನೇ ಮೀರಿಸುವಂಥಾ ರೀತಿಯಲ್ಲಿ ಶ್ರೀಮನ್ನಾರಾಯಣ ಮಿರುಗುತ್ತಿದ್ದಾನೆ. ಕಿರಿಕ್ ಪಾಟಿರ್ಧ ಚಿತ್ರದ ಅಗಾಧ ಗೆಲುವಿನ ನಂತರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರವಿದು. ಬರೋಬ್ಬರಿ ಎರಡು ವರ್ಷಗಳ ನಂತರ ಅವರು ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ. ಈ ಸಿನಿಮಾ ಬಿಡುಗಡೆಗೀಗ ಕ್ಷಣಗಣನೆ ಆರಂಭವಾಗಿದೆ. ವಿಶೇಷವೆಂದರೆ, ಶ್ರೀಮನ್ನಾರಾಯಣ ಬಿಡುಗಡೆಗೂ ಮುನ್ನವೇ ಮಹಾ ಗೆಲುವಿನ ಬಾವುಟ ನೆಟ್ಟು ಬಿಟ್ಟಿದ್ದಾನೆ.
ಬಿಡುಗಡೆಗೆ ಹತ್ತು ದಿನ ಇರುವಾಗಲೇ ಕೆಲ ಚಿತ್ರ ಮಂದಿರಗಳಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ ಆಗಿತ್ತು. ಈ ಸುದ್ದಿ ತಿಳಿಯುತ್ತಲೇ ಜನರೆಲ್ಲ ಮುಗಿ ಬಿದ್ದು ಟಿಕೆಟ್ ಖರೀದಿಸುವ ಉತ್ಸಾಹ ತೋರಿದ್ದರು. ಅದರಲ್ಲಿಯೂ ವಿಶೇಷವಾಗಿ ಊರ್ವಶಿ ಚಿತ್ರಮಂದಿರದಲ್ಲಿ ಮುಂಗಡ ಟಿಕೆಟ್ ಭರಾಟೆ ಜೋರಾಗಿತ್ತು. ಇದೀಗ ಆ ಚಿತ್ರಮಂದಿರದ ಟಿPಕೆಟ್ಗಳು ಸೋಲ್ಡ್ ಔಟಾಗಿರುವ ಸುದ್ದಿ ಬಂದಿದೆ. ಈ ಮೂಲಕವೇ ಶ್ರೀಮನ್ನಾರಾಯಣನ ಗೆಲುವಿನ ಬಾವುಟ ಮಿರುಗಲಾರಂಭಿಸಿದೆ.
ಊರ್ವಶಿ ಚಿತ್ರಮಂದಿರದಲ್ಲಿ ಪರಭಾಷಾ ಚಿತ್ರಗಳೇ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ. ಅಲ್ಲಿ ಯಶಸ್ವೀ ಪ್ರದರ್ಶನ ಕಂಡಿರೋದು ಕೆಜಿಎಫ್ನಂಥಾ ಕೆಲವೇ ಕೆಲ ಚಿತ್ರಗಳು ಮಾತ್ರ. ಆ ಚಿತ್ರಮಂದಿರದಲ್ಲಿಯೇ ಟಿಕೆಟ್ಗಳು ಈ ಪಾಟಿ ಸೇಲಾಗಿರೋದು ಪರಭಾಷಾ ಪ್ರೇಕ್ಷಕರೂ ಕೂಡಾ ಶ್ರೀಮನ್ನಾರಾಯಣನ ಬಗ್ಗೆ ಟದ್ಯಾವ ರೀತಿಯಲ್ಲಿ ಕ್ರೆಜ್ ಹೊಂದಿದ್ದಾರೆಂಬುದಕ್ಕೆ ಸಾಕ್ಷಿಯಂತಿದೆ. ಇದು ಎಲ್ಲರೂ ಅವಕ್ಕಾಗಿ ಹುಬ್ಬೇರಿಸುವಂತೆ ಮಾಡಿ ಬಿಟ್ಟಿದೆ. ಹೀಗೆ ಹೆಜ್ಜೆ ಹೆಜ್ಜೆಗೂ ದಾಖಲೆಗಳನ್ನು ಸೃಷ್ಟಿಸುತ್ತಾ ಅವನೇ ಶ್ರೀಮನ್ನಾರಾಯಣ ಚಿತ್ರ ಚಿತ್ರಮಂದಿರದತ್ತ ಸಾಗಿ ಬರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments