ಅವನೇ ಶ್ರೀಮನ್ನಾರಾಯಣನ ಕೌಂಟ್ ಡೌನ್ ಟ್ರೆಂಡ್!

Webdunia
ಗುರುವಾರ, 26 ಡಿಸೆಂಬರ್ 2019 (13:51 IST)
ಅಖಂಡ ಎರಡ್ಮೂರು ವರ್ಷಗಳ ನಿರಂತರ ಪರಿಶ್ರಮ ಮತ್ತು ಅಷ್ಟೇ ಕಾಲದಿಂದ ಪ್ರೇಕ್ಷಕ ವರ್ಗದಲ್ಲಿ ಮನೆ ಮಾಡಿಕೊಂಡಿರುವ ಕಾತರಗಳೆಲ್ಲ ಸಾಕಾರಗೊಳ್ಳುವ ಕ್ಷಣಗಳು ಹತ್ತಿರಾಗುತ್ತಿವೆ. ಈ ವಾರವೇ ಬಹು ನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ ತೆರೆಗಾಣುತ್ತಿದೆ.

ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ನಂತರ ಈ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕೆಜಿಎಫ್ ನಂತರದಲ್ಲಿ ಪ್ಯಾನಿಂಡಿಯಾ ಲೆವೆಲ್ಲನಲ್ಲೊಂದು ದಾಖಲೆ ಸೃಷ್ಟಿಸುತ್ತದೆಂಬಂಥಾ ಗಾಢ ನಂಬಿಕೆಗೆ ಕಾರಣವಾಗಿರುವ ಈ ಚಿತ್ರ ತೆರೆಗಾಣುವ ಕ್ಷಣದ ಕೌಂಟ್ಡೌನ್ ಟ್ರೆಂಡ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಯಲ್ಲಿದೆ.
 
ಪುಷ್ಕರ್ ಮಲ್ಲಿಕಾರ್ಜುನಯ್ಯ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಚಾರಕ್ಕೆ ಅನುಸರಿಸುತ್ತಿರುವ ಹೊಸತನದ ಮಾರ್ಗಗಳೇ ಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ. ಇದೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಶ್ರೀಮನ್ನಾರಾಯಣನ ಆಗಮನದ ಖುಷಿಯನ್ನು ಸಂಭ್ರಮಿಸಲಾಗುತ್ತಿದೆ. ಈ ಸಿನಿಮಾ ಬಗ್ಗೆ ತಮ್ಮದೇ ಆದ ನಿರೀಕ್ಷೆ ಮತ್ತು ಅದು ಮೂಡಿ ಬಂದಿರಬಹುದಾದ ರೀತಿಯ ಬಗ್ಗೆ ಕುತೂಹಲಕರ ಅಂಶಗಳನ್ನು ಹಂಚಿಕೊಳ್ಳುತ್ತಲೇ ಬಿಡುಗಡೆಯ ಕ್ಷಣಗಳನ್ನು ಎಂಜಾಯ್ ಮಾಡಲಾಗುತ್ತಿದೆ. ಇದು ಎಲ್ಲ ಪ್ರಚಾರಗಳನ್ನೂ ಮೀರಿದ ಮೈಲೇಜನ್ನು ಶ್ರೀಮನ್ನಾರಾಯಣನಿಗೆ ತಂದು ಕೊಡುತ್ತಿರೋದು ಸುಳ್ಳಲ್ಲ.
ಪ್ರಚಾರದ ವಿಚಾರದಲ್ಲಿ ಹೊಸಾ ದಿಕ್ಕಿನತ್ತ ಮುಖ ಮಾಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವನೇ ಶ್ರೀಮನ್ನಾರಾಯಣ ಚಿತ್ರದ ಬೃಹತ್ ಕಟೌಟ್ ಮುಂದೆ ನಿಂತು ಎನ್ನು ಎಪ್ಪತ್ತೆರಡು ಗಂಟೆಗಳು ಮಾತ್ರ ಬಾಕಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಬಂದಿರೋ ಪ್ರತಿಕ್ರಿಯೆಗಳಲ್ಲಿಯೇ ಅವನೇ ಶ್ರೀಮನ್ನಾರಾಯಣ ಚಿತರ್ರದ ಬಗ್ಗೆ ಎಂಥಾ ಕ್ರೇಜ್ ಎಲ್ಲೆಡೆ ಹರಡಿಕೊಂಡಿದೆ ಎಂಬುದರ ಚಿತ್ರಣವನ್ನು ನೀಡಿದೆ. ಇದೀಗ ಬಹುತೇಕರು ಗಂಟೆಗಳನ್ನು ಲೆಕ್ಕ ಹಾಕುತ್ತಾ ಶ್ರೀಮನ್ನಾರಾಯಣನನ್ನು ಜಪಿಸಲಾರಂಭಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments