Daily Horoscope

Select Your Language

Notifications

webdunia
webdunia
webdunia
webdunia

BBK13: ನೀವು ಮದುವೆಯಾಗಿಲ್ಲಾಂದ್ರೆ ನಿಮ್ಮನ್ನೇ ಮದುವೆಯಾಗ್ತಿದ್ದೆ ಎಂದು ಸಂಗೀತಾ ಗಂಡನಿಗೆ ಹೇಳಿದ್ದರಂತೆ ಕಾವ್ಯಾ

Sudarshan-Sangeetha-Kavya
ಬೆಂಗಳೂರು: ಬಿಗ್ ಬಾಸ್ ಕನ್ನಡ 13 ರಲ್ಲಿ ಸ್ಪರ್ಧಿಯಾಗಿರುವ ಕಾವ್ಯಾ ಗೌಡ ನೀವು ಮದುವೆಯಾಗಿಲ್ಲಾಂದ್ರೆ ನಿಮ್ಮನ್ನೇ ಮದುವೆಯಾಗ್ತಿದ್ದೆ ಎಂದು ಸಂಗೀತಾ ಗಂಡನಿಗೆ ಹೇಳಿದ್ದರಂತೆ. ಹೀಗಂತ ಸ್ವತಃ ಸಂಗೀತಾ ಹೇಳಿದ್ದಾರೆ.

ಎಲ್ಲರಿಗೂ ಗೊತ್ತಿರುವ ಸಂಗೀತಾ ಪತಿ ನಟ ಸುದರ್ಶನ್ ರಂಗಪ್ರಸಾದ್. ಕಲರ್ಸ್ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿದ್ದ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಸುದರ್ಶನ್ ಮತ್ತು ಕಾವ್ಯಾ ಗೌಡ ಪ್ರಮುಖ ಪಾತ್ರ ಮಾಡುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ.

ಇದೀಗ ಬಿಗ್ ಬಾಸ್ ನಲ್ಲಿ ಕಾವ್ಯಾ ಮತ್ತು ಸುದರ್ಶನ್ ರಿಯಲ್ ಲೈಫ್ ಪತ್ನಿ ಸಂಗೀತಾ ಒಳ‍್ಳೆ ಬಾಂಡಿಂಗ್ ಇಟ್ಟುಕೊಂಡಿದ್ದಾರೆ. ಆಗಾಗ ಸುದರ್ಶನ್ ಬಗ್ಗೆ ಸಂಗೀತಾ ಮತ್ತು ಕಾವ್ಯಾ ಮಾತನಾಡುತ್ತಿರುತ್ತಾರೆ. ಇದರ ನಡುವೆ ಸಂಗೀತಾ ತಮ್ಮ ಸಹಸ್ಪರ್ಧಿಗಳಿಗೆ ಕಾವ್ಯಾ ಹೇಳೋದು ನೀವೇನಾದರೂ ಮದುವೆಯಾಗದೇ ಇದ್ದಿದ್ದರೆ ನಾನೇ ನಿಮ್ಮನ್ನು ಮದುವೆಯಾಗುತ್ತಿದ್ದೆ ಅಂತ ಎಂದಿದ್ದಾರೆ. ಅದನ್ನು ಕೇಳಿ ಪಕ್ಕದಲ್ಲಿದ್ದ ಸೌಂದರ್ಯ ನೀವು ಹೇಳದೆನೇ ನಿಮ್ಮ ಗಂಡನನ್ನು ನಂಗೆ ಮದುವೆಯಾಗ್ಲಿಕೆ ಬೇಕು, ಅಂದರೆ ಇಮ್ಯಾಜಿನ್ ಮಾಡಿ. ನಾನು ನೋಡಿಲ್ಲ, ಹೇಳಿಲ್ಲ ಕೇಳಿಲ್ಲ ಎಂದು ಕಾವ್ಯಾ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾವ್ಯಾ ಕೂಡಾ ಹೌದು ಎಂದಿದ್ದು, ‘ಅವನದ್ದೆಲ್ಲಾ ಚಿಕ್ಕ ನಡೆ ಇಂಪ್ರೆಸ್ ಮಾಡೋದು. ಶೂಟಿಂಗ್ ನಲ್ಲಿ ನಂಗೂ ಅವನಿಗೂ ಅರ್ಧಗಂಟೆ ಬ್ರೇಕ್ ಇರುತ್ತೆ. ಆಗ ಬಾ ಹೊರಗೆ ಹೋಗೋಣ ಫ್ರೈಸ್ ತಿನ್ನೋಣ ಎಂದು ಹೋಗೋದು’ ಎಂದು ಸುದರ್ಶನ್ ರನ್ನು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಲ್ಲರೆ ಬದಲಿಗೆ ಚಾಕಲೇಟ್ ನೀಡಿದಾಗ ನಾನಾ ಪಾಟೇಕರ್ ಏನು ಮಾಡಿದ್ರು: ಈ ಐಕಾನಿಕ್ ದೃಶ್ಯ ಈಗಲೂ ವೈರಲ್ Video