Daily Horoscope

Select Your Language

Notifications

webdunia
webdunia
webdunia
webdunia

BBK13: ಕಿಚ್ಚನ ಬುದ್ಧಿ ಮಾತಿಗೂ ಬೆಲೆ ಇಲ್ಲ.. ವೀಕೆಂಡ್ ನಲ್ಲಿ ತಪ್ಪಾಯ್ತು ಎನ್ನೋದು, ಗೇಮ್ ನಲ್ಲಿ ಮತ್ತದೇ ತಪ್ಪು ಮಾಡೋದು

Manja BBK13
ಬೆಂಗಳೂರು: ಬಿಗ್ ಬಾಸ್ ಕನ್ನಡ 13 ರಲ್ಲಿ ಸ್ಪರ್ಧಿಗಳು ಆಡುತ್ತಿರುವ ರೀತಿ ನೋಡಿದ್ರೆ ಕಿಚ್ಚನ ಮಾತಿಗೂ ಬೆಲೆಯಿಲ್ಲ ಎನಿಸುತ್ತಿದೆ. ವೀಕೆಂಡ್ ಶೋನಲ್ಲಿ ಕಿಚ್ಚ ಪ್ರಶ್ನೆ ಮಾಡಿದಾಗ ನನ್ನದು ತಪ್ಪಾಗಿದೆ ಸಾರಿ ಎನ್ನೋದು, ಗೇಮ್ ನಲ್ಲಿ ಮತ್ತೆ ಅದೇ ತಪ್ಪು ಮಾಡೋದು.. ಇದು ಈ ವಾರವೂ ಮುಂದುವರಿಯುವ ಲಕ್ಷಣವಿದೆ.

ಕಾವ್ಯಾ ಮತ್ತು ಮಂಜು ಟಾಸ್ಕ್ ಆಡುವಾಗ ಮತ್ತೆ ಪ್ರಮಾದ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಏನೋ ನಿಯಮ ಹೇಳಿದರೆ ಮಂಜ ಇನ್ನೇನೋ ತಪ್ಪು ಮಾಡಿ ಆಟವನ್ನೇ ಹಾಳು ಮಾಡಿದ್ದಾರೆ. ಸಿಟ್ಟಿಗೆದ್ದ ಬಿಗ್ ಬಾಸ್ ಕಾವ್ಯಾ ಮತ್ತು ಮಂಜ ಆಟವನ್ನೇ ರದ್ದು ಮಾಡಿದೆ.

ಇದರ ಜೊತೆಗೆ ಮನೆಯವರು 50% ದಿನಸಿಯನ್ನೂ ಕಳೆದುಕೊಂಡಿದ್ದಾರೆ. ಇದರಿಂದ ಮನೆಯವರೆಲ್ಲಾ ಬೇಸರದಲ್ಲಿದ್ದಾರೆ. ಆದರೆ ಮಂಜ ಮಾತ್ರ ನಗುತ್ತಾ ಸ್ವಲ್ಪವೂ ಪಶ್ಚಾತ್ತಾಪವಿಲ್ಲದೇ ನಡೆದುಕೊಂಡಿದ್ದಾರೆ. ಇದೇ ರೀತಿ ಕಳೆದ ವಾರ ಯಶಸ್ ಕೂಡಾ ಮಾಡಿದ್ದರು. ಇದಕ್ಕೆ ಮೊದಲು ಕಿಚ್ಚ ಸುದೀಪ್ ಇದೇ ವಿಚಾರವಾಗಿ ಮನೆಯವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ನನ್ನ ಒಂದು ಕಣ್ಣು ಹೋದ್ರೂ ಪರವಾಗಿಲ್ಲ ಆದರೆ ಉಳಿದವರ ಎರಡೂ ಕಣ್ಣು ಹೋಗಬೇಕು ಎಂಬ ಬುದ್ಧಿ ಸರಿಯಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಕಳೆದ ವಾರವಷ್ಟೇ ಟಾಸ್ಕ್ ಹಾಳು ಮಾಡಿದ್ದಕ್ಕೆ ಕಿಚ್ಚನಿಂದ ಮನೆಯ ಸದಸ್ಯರು ಅದರಲ್ಲೂ ಮಂಜು, ಗಾನವಿ ಬೈಸಿಕೊಂಡಿದ್ದರು. ಇಷ್ಟೆಲ್ಲಾ ಆದರೂ ಇದೀಗ ಮತ್ತೆ ಮಂಜ ಈ ರೀತಿ ವರ್ತಿಸಿದ್ದಕ್ಕೆ ವೀಕ್ಷಕರು ಕಿಡಿ ಕಾರಿದ್ದಾರೆ. ಕಿಚ್ಚ ಹೇಳಿದರೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಪ್ರತೀ ಬಾರಿ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ್ ಯಾವುದಾದರೂ ತಪ್ಪಿನ ಬಗ್ಗೆ ಹೇಳಿದಾಗ ನನ್ನಿಂದ ತಪ್ಪಾಗಿದೆ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎನ್ನೋದು. ಆದರೆ ಮತ್ತೆ ಅದೇ ತಪ್ಪು ಮಾಡೋದು ಸ್ಪರ್ಧಿಗಳ ಖಯಾಲಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್‌ನಲ್ಲಿ 'ಪ್ರೇಮದ ಊರಲಿ' ಮ್ಯಾಜಿಕ್, ಟಿಕೆಟ್‌ಗಳೆಲ್ಲ ಸೋಲ್ಡ್ ಔಟ್: ಇದುವರೆಗೆ ಗಳಿಸಿದ್ದೆಷ್ಟು