Daily Horoscope

Select Your Language

Notifications

webdunia
webdunia
webdunia
webdunia

BBK13: ಮಿಡ್ ವೀಕ್ ಎಲಿಮಿನೇಟ್ ಆದ ಸ್ಪರ್ಧಿಯ ಹೆಸರು ಕೇಳಿ ವೀಕ್ಷಕರಿಗೇ ಶಾಕ್

BBK13
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಈ ವಾರ ಮಿಡ್ ವೀಕ್ ನಲ್ಲಿ ಎಲಿಮಿನೇಟ್ ಆದ ವ್ಯಕ್ತಿಯ ಹೆಸರು ಕೇಳಿ ವೀಕ್ಷಕರು ನಿಜಕ್ಕೂ ಶಾಕ್ ಆಗಿದ್ದಾರೆ.
 
ಕಳೆದ ವಾರಂತ್ಯಕ್ಕೆ ಯಾವುದೇ ಎಲಿಮಿನೇಷನ್ ಇರಲಿಲ್ಲ. ಆದರೆ ಈ ವಾರ ಟಾಸ್ಕ್ ಮೂಲಕ ಮಿಡ್ ವೀಕ್ ಎಲಿಮಿನೇಷನ್ ಇರುವುದಾಗಿ ಬಿಗ್ ಬಾಸ್ ಹೇಳಿದಾಗ ಎಲ್ಲಾ ಸ್ಪರ್ಧಿಗಳಿಗೂ ಆತಂಕವಾಗಿತ್ತು. ಇದೀಗ ಟಾಸ್ಕ್ ನಲ್ಲಿ ವಿನ್ ಆಗಿದ್ದ ಕಾವ್ಯಾ, ಧನುಷ್, ಆಸಿಯಾ ಮತ್ತು ಕಿರಣ್ ಶಾಸ್ತ್ರಿಗೆ ಎಲಿಮಿನೇಷನ್ ಮಾಡಲು ಬಿಗ್ ಬಾಸ್ ಬ್ರಹ್ಮಾಸ್ತ್ರ ಕೊಟ್ಟಿತ್ತು.
 
ಅದರಂತೆ ಈ ನಾಲ್ವರು ಸ್ಪರ್ಧಿಗಳಿಗೆ ಮನೆಯ ಇತರೆ ಸ್ಪರ್ಧಿಗಳ 50% ವೋಟ್ ಕಸಿದುಕೊಳ್ಳುವ ಅವಕಾಶ ನೀಡಲಾಗಿತ್ತು. ಆ ರೀತಿ ವೋಟ್ ಕಸಿದ ಬಳಿಕ ಯಾರಿಗೆ ಕಡಿಮೆ ವೋಟ್ ಉಳಿಯುತ್ತದೋ ಅವರು ಎಲಿಮಿನೇಟ್ ಆಗುತ್ತಿದ್ದರು.
 
ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈ ವಾರ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತಾಂಡವ್ ರಾಮ್ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ವೀಕ್ಷಕರಿಗೆ ನಿಜಕ್ಕೂ ಶಾಕ್ ಆಗಿದೆ. ಮೊದಲ ವಾರವೇನೋ ಗಗನ್ ಬಾಲ ಎಂದು ಕಿಚ್ಚ ಸುದೀಪ್ ಕೈಯಲ್ಲೂ ತಾಂಡವ್ ಬೈಸಿಕೊಂಡಿದ್ದರು. ಆದರೆ ಕಳೆದ ವಾರದಿಂದ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ, ಪಕ್ಕಾ ಫೈಟ್ ಕೊಡುತ್ತಿದ್ದ ತಾಂಡವ್ ವೀಕ್ಷಕರಿಗೆ ನಿಧಾನವಾಗಿ ಇಷ್ಟವಾಗುತ್ತಿದ್ದರು. ಅದರಲ್ಲೂ ಗಗನ್-ತಾಂಡವ್ ಸ್ನೇಹ ಜೋಡೆತ್ತು ಎಂದ ಎಲ್ಲರೂ ಕರೆಯುವಂತೆ ಮಾಡಿತ್ತು. ಆದರೆ ಈಗ ತಾಂಡವ್ ರನ್ನೇ ಎಲಿಮಿನೇಟ್ ಮಾಡಿದ್ದು ನಿಜಕ್ಕೂ ವೀಕ್ಷಕರಿಗೆ ಶಾಕ್ ಉಂಟು ಮಾಡಿದೆ. ಹಾಗಿದ್ದರೆ ನಮ್ಮ ವೋಟ್ ಗೆ ಬೆಲೆಯೇ ಇಲ್ವಾ? ಮನೆಯಲ್ಲಿ ತಾಂಡವ್ ಗಿಂತಲೂ ಲಿಖಿತ್, ವೈಷ್ಣವಿ ದುರ್ಬಲ ಸ್ಪರ್ಧಿಗಳಾಗಿದ್ದಾರೆ. ಅವರನ್ನೆಲ್ಲಾ ಬಿಟ್ಟು ಒಳ್ಳೆ ಮನರಂಜನೆ ಕೊಡುತ್ತಿದ್ದ ಸ್ಪರ್ಧಿಯನ್ನೇ ಎಲಿಮಿನೇಟ್ ಮಾಡಿದ ಮೇಲೆ ಶೋ ಯಾರು ನೋಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ ಅಧಿಕೃತ ಪ್ರಕಟಣೆ ಹೊರಬರುವವರೆಗೂ ಯಾವುದನ್ನೂ ಖಚಿತಪಡಿಸುವಂತಿಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕನ್ನಡಿಗರು ಹೆಮ್ಮೆಪಡುವ ಮಾತನಾಡಿದ ಅನಂತ್ ನಾಗ್ Video