ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ತನಗೆ ಗೌರವ ಕೊಡುತ್ತಿಲ್ಲ ಎಂದು ಹೈಡ್ರಾಮಾ ಮಾಡಿದ್ದ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ವಾರಂತ್ಯದ ಸಂಚಿಕೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನನಗೆ ಮರ್ಯಾದೆ ಸಿಗ್ತಿಲ್ಲ. ಬಾಗಿಲು ತೆಗೆಯಿರಿ, ಮರ್ಯಾದೆ ಇಲ್ಲದ ಕಡೆ ನಾನು ಇರಲ್ಲ ಹೋಗ್ತೀನಿ ಎಂದು ವಾರವಿಡೀ ಅಶ್ವಿನಿ ರೋಷಾವೇಷ ತೋರಿಸಿದ್ದರು. ಅದೇ ವಿಚಾರಕ್ಕೆ ಕಿಚ್ಚ ಸುದೀಪ್ ಈಗ ವಾರಂತ್ಯದ ಎಪಿಸೋಡ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಕಲರ್ಸ್ ವಾಹಿನಿ ಈಗ ಪ್ರೋಮೋ ಹರಿಯಬಿಟ್ಟಿದೆ. ಏಕವಚನ ಏಕವಚನ ಅಂತೀರಿ. ನಿಮಗೆ ಹೋಗಿ ಬನ್ನಿ ಎಂದು ಕರೆಸಿಕೊಳ್ಳಬೇಕು ಎಂದರೆ ಪ್ರತೀ ಮಗುವಿಗೂ ಹೋಗಿ ಬನ್ನಿ ಎಂದು ಕರಿಯುವುದನ್ನು ಕಲಿಯಿರಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಮಾತೆತ್ತಿದ್ದರೆ ಯಾವ ಹುಡುಗಿಗೂ ಹಿಂಗೆ ಮಾತನಾಡಬೇಡಿ ಅಂತೀರಿ, ಯಾರು ಏನು ಮಾತನಾಡ್ತಿದ್ದಾರೆ ಇಲ್ಲಿ. ಅಶ್ವಿನಿಯವರೇ ವುಮನ್ ಕಾರ್ಡ್ ಬೇಡ ಇಲ್ಲಿ ಎಂದು ಸುದೀಪ್ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಒಬ್ಬ ವ್ಯಕ್ತಿಯಾಗಿ ನನಗೆ ತೇಜೋವಧೆ ಮಾಡ್ತಿದ್ದಾರೆ ಎನಿಸಿತು ಎಂದು ಸುದೀಪ್ ಗೆ ಗಿಲ್ಲಿ ಬಗ್ಗೆ ಅಶ್ವಿನಿ ಕಂಪ್ಲೇಂಟ್ ಮಾಡಿದ್ದಾರೆ. ಇದಕ್ಕೆ ಸುದೀಪ್ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಹಾಗೆಯೇ ಅಶ್ವಿನಿ ಪರ ಯಾರಿದ್ದೀರಿ ಎಂದು ಮಹಿಳಾ ಸ್ಪರ್ಧಿಗಳಿಗೆ ಕೈ ಎತ್ತಲು ಹೇಳಿದ್ದಾರೆ.