ಬಿಬಿಕೆ10: ಮುತ್ತಿಗಾಗಿ ತನಿಷಾ ಹಿಂದೆ ಬಿದ್ದ ವಿನಯ್

Webdunia
ಬುಧವಾರ, 13 ಡಿಸೆಂಬರ್ 2023 (11:20 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಶಾಲೆಯ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ವೀಕ್ಷಕರಿಗೂ ಸಖತ್ ಫನ್, ಎಂಟರ್ ಟೈನ್ ಮೆಂಟ್ ಸಿಗುತ್ತಿದೆ.

ಕಳೆದ ವಾರ ಮಾರಾಮಾರಿಯ ಟಾಸ್ಕ್ ಆಡಿ ಎಲ್ಲರೂ ಪರಸ್ಪರ ಉರಿದುಬೀಳುವಂತಹ ವಾತಾವರಣವಿತ್ತು. ಬಹುಶಃ ಆ ವಾತಾವರಣ ತಿಳಿಸಿಗೊಳಿಸಲೆಂದೇ ಈ ವಾರ ಬಿಗ್ ಬಾಸ್ ಶಾಲೆ ಟಾಸ್ಕ್ ಆಡಿಸುತ್ತಿದೆ.

ಶಾಲೆ ಟಾಸ್ಕ್ ನಲ್ಲಿ ನಿನ್ನೆ ತನಿಷಾ ಟೀಚರ್ ಆಗಿದ್ದರೆ ಉಳಿದವರು ವಿದ್ಯಾರ್ಥಿಗಳಾಗಿದ್ದರು. ನಿನ್ನೆ ತನಿಷಾ ಟೀಚರ್ ಗೆ ವಿದ್ಯಾರ್ಥಿ ವರ್ತೂರು ಸಂತೋಷ್ ಐ ಲವ್ ಯೂ ಎಂದು ಬರೆದು ತಮಾಷೆ ಮಾಡಿದ್ದರು.

ತನಿಷಾ ಅವರಿಗೆ ‘ಹುಡುಗರ’ ಕಾಟ ಇನ್ನೂ ನಿಂತಿಲ್ಲ. ಪೌಡರ್ ರೂಂನಲ್ಲಿ ವಿದ್ಯಾರ್ಥಿ ವೇಷದಲ್ಲಿರುವ ವಿನಯ್, ತನಿಷಾರನ್ನು ಕಾಡಿದ್ದಾರೆ. ಟೀಚರ್ ನಾನು ಊಟ ತಂದಿದ್ದೀನಿ ಮಿಸ್, ಕೇಕ್ ತಂದಿದ್ದೀನಿ ಮಿಸ್ ಎಂದು ಮುದ್ದು ಮುದ್ದಾಗಿ ಮಕ್ಕಳಂತೆ ಹೇಳಿ ಕೊನೆಗೆ ನಂಗೆ ಒಂದು ಮುತ್ತಾ ಕೊಡಲ್ವಾ ಎಂದು ಕೇಳಿದ್ದಾರೆ.

ಇದಕ್ಕೆ ನಾಚಿಕೊಂಡ ತನಿಷಾ ನಾನು ನೀವು ಸ್ಟಾರ್ ಕೇಳ್ತೀರಿ ಎಂದುಕೊಂಡೆ ಎಂದಿದ್ದಾರೆ. ಆಗ ವಿನಯ್ ಸ್ಟಾರ್ ಕಾರ್ತಿಕ್ ಗೆ ಕೊಡಿ, ನನಗೆ ಮುತ್ತಾ ಕೊಡಿ ಎಂದು ಕೇಳಿದ್ದಾರೆ. ವಿನಯ್ ಕಾಟಕ್ಕೆ ನಗು ತಡೆಯಲಾಗದೇ ತನಿಷಾ ನೀವು ಯಾಕೋ ಅಡ್ವಾಂಟೇಜ್ ತೆಗೆದುಕೊಳ್ಳುವಂತೆ ಕಾಣುತ್ತಿದೆಯಲ್ಲ ಎಂದಿದ್ದಾರೆ. ಆಗ ವಿನಯ್ ‘ನಮ್ಮ ಮನೆಯಲ್ಲಿ ಅವ್ಬ ನೋಡುತ್ತಿರುತ್ತಾರೆ. ಮನೆಗೆ ಹೋದ ತಕ್ಷಣ ಕೆರ ತೆಗೆದುಕೊಂಡು ಹೊಡೆಯುತ್ತಾರೆ’ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಮುಂದಿನ ಸುದ್ದಿ
Show comments