Webdunia - Bharat's app for daily news and videos

Install App

BBK11: ಏನೇ ಲೆಕ್ಕಾಚಾರ ಮಾಡಿದ್ರೂ ಈ ಬಾರಿಯೂ ಬಿಗ್ ಬಾಸ್ ಗೆಲ್ಲೋದು ಗಂಡಮಕ್ಳೇ

Krishnaveni K
ಬುಧವಾರ, 15 ಜನವರಿ 2025 (10:41 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯುತ್ತಾ ಬಂದಿದ್ದು ಏನೇ ಲೆಕ್ಕಾಚಾರ ಮಾಡಿದರೂ ಈ ಬಾರಿಯೂ ಪುರುಷರೇ ಬಿಗ್ ಬಾಸ್ ಗೆಲ್ಲುವುದು ಬಹುತೇಕ ಖಚಿತವಾಗಿದೆ.
 

ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಒಮ್ಮೆ ಮಾತ್ರ ಮಹಿಳಾ ಸ್ಪರ್ಧಿ ಗೆದ್ದಿದ್ದರು. ಅದು ಹಿರಿಯ ನಟಿ ಶ್ರುತಿ. ಅವರನ್ನು ಬಿಟ್ಟರೆ ಇದುವರೆಗೆ ಎಲ್ಲಾ 10 ಸೀಸನ್ ಗಳಲ್ಲೂ ಪುರುಷ ಅಭ್ಯರ್ಥಿಗಳೇ ಗೆದ್ದಿದ್ದಾರೆ.

ಈ ಬಗ್ಗೆ ಕೆಲವು ಮಹಿಳಾ ಅಭಿಮಾನಿಗಳಲ್ಲಿ ಅಸಮಾಧಾನವೂ ಇದೆ. ಮಹಿಳಾ ಸ್ಪರ್ಧಿಗಳ ಪೈಕಿ ಸ್ಟ್ರಾಂಗ್ ಅಭ್ಯರ್ಥಿಗಳನ್ನು ಕಳುಹಿಸಲ್ಲ, ಮಹಿಳೆಯರು ಗುಂಪುಗಾರಿಕೆ ಮಾಡಿಕೊಂಡೇ ಸೋಲುತ್ತಾರೆ, ಮಹಿಳೆಯರನ್ನು ಹೆಚ್ಚು ಪ್ರಮೋಟ್ ಮಾಡಲ್ಲ ಎಂದೆಲ್ಲಾ ದೂರುಗಳಿವೆ.

ಅದೇನೇ ಇದ್ದರೂ ಈ ಬಾರಿಯಾದರೂ ಮಹಿಳಾ ಅಭ್ಯರ್ಥಿಗಳು ಗೆಲ್ಲುವ ಕನಸು ನನಸಾಗುವ ಸಾಧ್ಯತೆ ಕ್ಷೀಣವಾಗಿದೆ. ಮಹಿಳಾ ಸ್ಪರ್ಧಿಗಳ ಪೈಕಿ ಈ ಬಾರಿ ಹೆಚ್ಚು ಸದ್ದು ಮಾಡುತ್ತಿದ್ದವರಲ್ಲಿ ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಮೋಕ್ಷಿತಾ ಇದ್ದರು. ಈ ಪೈಕಿ ಚೈತ್ರಾ ಹೊರ ಹೋಗಿದ್ದಾರೆ. ಇನ್ನು ಗೌತಮಿಯನ್ನೂ ಮನೆಯಿಂದ ಹೊರಹಾಕುವುದಕ್ಕೆ ಅತೀ ಹೆಚ್ಚು ಜನ ವೋಟ್ ಮಾಡಿದ್ದಾರೆ.

ಭವ್ಯಾ ಈಗಾಗಲೇ ಜನರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಮೋಕ್ಷಿತಾ ಜೊತೆ ಗುಂಪುಗಾರಿಕೆ ಮಾಡಿದರು, ತ್ರಿವಿಕ್ರಮ್ ಗೆ ಮೋಸ ಮಾಡಿದರು ಎಂದೆಲ್ಲಾ ಕೆಲವು ವರ್ಗದ ವೀಕ್ಷಕರಿಗೆ ಅವರ ಮೇಲೆ ಅಸಮಾಧಾನಗಳಿವೆ. ಮೋಕ್ಷಿತಾಗೆ ಫೈನಲ್ ಗೆಲ್ಲುವಷ್ಟು ವೋಟ್ ಪವರ್ ಇಲ್ಲ. ಹೀಗಾಗಿ ಈ ಬಾರಿಯೂ ಪುರುಷ ಅಭ್ಯರ್ಥಿಗಳೇ ಗೆಲ್ಲುವುದು ಬಹುತೇಕ ಖಚಿತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments