Webdunia - Bharat's app for daily news and videos

Install App

ಪೈಲ್ವಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ, ಅಭಿಮಾನಿಗಳ ಕಿಡಿ

Webdunia
ಶುಕ್ರವಾರ, 13 ಸೆಪ್ಟಂಬರ್ 2019 (09:06 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾ ನಿನ್ನೆಯಷ್ಟೇ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.


ಹಾಗಿದ್ದರೂ ಚಿತ್ರ ವೀಕ್ಷಿಸಿದ ಕೆಲವರು ಪೈಲ್ವಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಳಪೆ ಎಂದು ಬರೆದುಕೊಂಡಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಆಕ್ರೋಶ ಸೃಷ್ಟಿಸಿದೆ.

ಚಿತ್ರದ ಫಸ್ಟ್ ಶೋ ಮುಗಿಯುವ ಮೊದಲೇ ಚಿತ್ರ ನಿರೀಕ್ಷಿಸಿದಷ್ಟು ಚೆನ್ನಾಗಿಲ್ಲ ಎಂದೆಲ್ಲಾ ಬರೆದುಕೊಂಡವರ ವಿರುದ್ಧ ಕಿಚ್ಚನ ಅಭಿಮಾನಿಗಳು ಕಿಡಿ ಕಾರಿದ್ದಾರೆ. ದಯವಿಟ್ಟು ಇಂತಹ  ಅಪಪ್ರಚಾರವನ್ನು ನಂಬಬೇಡಿ. ಯಾರೂ ಚಿತ್ರದ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಚಿತ್ರಕ್ಕೆ ಹಿನ್ನಡೆಯುಂಟು ಮಾಡಬೇಡಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎಷ್ಟು ಲಾಭವೋ ಅಷ್ಟೇ ಶಾಪವೂ ಆಗಿರುವುದಕ್ಕೆ ತಕ್ಕ ನಿದರ್ಶನವಿದು. ಹೊಸ ಚಿತ್ರ ತೆರೆ ಕಂಡ ದಿನವೇ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವುದು, ಸಿನಿಮಾವನ್ನು ಥಿಯೇಟರ್ ನಿಂದ ಲೈವ್ ಆಗಿ ತೋರಿಸಿ ಚಿತ್ರತಂಡದ ಶ್ರಮ ವ್ಯರ್ಥ ಮಾಡುವುದು ಇತ್ಯಾದಿ ಕೆಲಸವನ್ನು ಎಷ್ಟೇ ತಡೆಹಿಡಿಯಲು ಯತ್ನಿಸಿದರೂ ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments