Select Your Language

Notifications

webdunia
webdunia
webdunia
webdunia

ರೆಬಲ್ ಸ್ಟಾರ್ ಅಂಬಿ ಮಾಮನ ಮನೆಯಲ್ಲಿ ರಾಕಿಂಗ್ ಬೇಬಿ ಐರಾ ಯಶ್

ರೆಬಲ್ ಸ್ಟಾರ್ ಅಂಬಿ ಮಾಮನ ಮನೆಯಲ್ಲಿ ರಾಕಿಂಗ್ ಬೇಬಿ ಐರಾ ಯಶ್
ಬೆಂಗಳೂರು , ಗುರುವಾರ, 10 ಅಕ್ಟೋಬರ್ 2019 (09:33 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್ ರೆಬಲ್ ಸ್ಟಾರ್ ಅಂಬರೀಶ್ ಮನೆಗೆ ಭೇಟಿಯಿತ್ತ ಕ್ಷಣಗಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಯಶ್ ಮತ್ತು ರಾಧಿಕಾ ತಮ್ಮ ಮುದ್ದಿನ ಮಗಳನ್ನು ಇದೇ ಮೊದಲ ಬಾರಿಗೆ ಅಂಬರೀಶ್ ನಿವಾಸಕ್ಕೆ ಕರೆತಂದಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಮನೆಗೆ ಬಂದ ಪುಟಾಣಿ ಗೆಸ್ಟ್ ನಿಂದ ಅಂಬರೀಶ್ ಪತ್ನಿ ಸುಮಲತಾ ಖುಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಐರಾಗೆ ಸುಮಲತಾ ಉಡುಗೊರೆ ನೀಡಿ ಸಂಭ್ರಮಿಸಿದ್ದಾರೆ.

ಅಂಬರೀಶ್ ದಂಪತಿಗೆ ಯಶ್ ಆಪ್ತರಾಗಿದ್ದಾರೆ. ಅಂಬರೀಶ್ ಸಾವನ್ನಪ್ಪು ಮೊದಲು ಐರಾ ಇನ್ನೂ ಹುಟ್ಟಿರಲಿಲ್ಲ. ಹಾಗಿದ್ದರೂ ಯಶ್ ಮಗುವಿಗೆ ಮೊದಲೇ ತೊಟ್ಟಿಲೊಂದನ್ನು ಮಾಡಲು ಆರ್ಡರ್ ಕೊಟ್ಟಿದ್ದರು. ಅಂಬರೀಶ್ ಸಾವಿನ ಬಳಿಕ ಈ ತೊಟ್ಟಿಲು ರೆಡಿಯಾದ ಮೇಲೆ ಸ್ವತಃ ಸುಮಲತಾ ಯಶ್ ಮಗಳಿಗೆ ಈ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗಾಗಿ ಕಿಚ್ಚ ಸುದೀಪ್ ಪಡೆಯಲಿರುವ ಸಂಭಾವನೆಯೆಷ್ಟು ಗೊತ್ತಾ?