ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳು ಐರಾ ಯಶ್ ಗೆ ಇಂದು ಜನ್ಮದಿನದ ಸಂಭ್ರಮ.
ಮೂರನೇ ವರ್ಷಕ್ಕೆ ಕಾಲಿಟ್ಟಿರುವ ಐರಾ ಯಶ್ ಗೆ ಯಶ್-ರಾಧಿಕಾ ಪಂಡಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.
ನಟಿ ರಾಧಿಕಾ ಕೂಡಾ ತಮ್ಮ ಮುದ್ದಿನ ಮಗಳೊಂದಿಗಿನ ಸುಂದರ ಕ್ಷಣದ ಫೋಟೋ ಪ್ರಕಟಿಸಿ ಶುಭಾಶಯ ಕೋರಿದ್ದಾರೆ. ಐರಾ ಚಿಕ್ಕ ವಯಸ್ಸಿನಿಂದಲೇ ಮುದ್ದು ಫೋಟೋ, ವಿಡಿಯೋ ಮೂಲಕ ನೆಟ್ಟಿಗರ ಗಮನ ಸೆಳೆದವಳು. ಹೀಗಾಗಿ ಆಕೆಯ ಜನ್ಮ ದಿನ ಎಲ್ಲರಿಗೂ ಸ್ಪೆಷಲ್.