Publish Date: Thu, 13 Jan 2022 (16:56 IST)
Updated Date: Thu, 13 Jan 2022 (16:57 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿದ್ದ ಮೀ ಟೂ ಪ್ರಕರಣದಲ್ಲಿ ನಟ ಅರ್ಜುನ್ ಸರ್ಜಾಗೆ ಜಯ ಸಿಕ್ಕಿದೆ. ಶ್ರುತಿ ಹರಿಹರನ್ ಮಾಡಿದ್ದ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಕೋರ್ಟ್ ತಳ್ಳಿ ಹಾಕಿದೆ.
2018 ರಲ್ಲಿ ಸಿನಿಮಾ ಚಿತ್ರೀಕರಣವೊಂದರ ವೇಳೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದೀಗ ನ್ಯಾಯಾಲಯವೂ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣ ಕೈ ಬಿಟ್ಟಿದೆ.
ಇದರಿಂದ ಈ ಪ್ರಕರಣದಲ್ಲಿ ಅರ್ಜುನ್ ಸರ್ಜಾಗೆ ಮೇಲುಗೈ ಸಿಕ್ಕಿದೆ. ನ್ಯಾಯಾಲಯವೂ ಪೊಲೀಸರ ರಿಪೋರ್ಟ್ ಒಪ್ಪಿದ್ದರಿಂದ ಅರ್ಜುನ್ ಸರ್ಜಾ ನಿರಪರಾಧಿ ಎಂದು ಸಾಬೀತಾಗಿದೆ.