Webdunia - Bharat's app for daily news and videos

Install App

ರಿಯಲ್ ಲೈಫ್ ನಲ್ಲೂ ಜೋಡಿಯಾಗ್ತಾರಾ ನೀನಾದೆ ನಾ ಸೀರಿಯಲ್ ಹೀರೋ-ಹೀರೋಯಿನ್

Krishnaveni K
ಮಂಗಳವಾರ, 9 ಏಪ್ರಿಲ್ 2024 (11:52 IST)
Photo Courtesy: Instagram
ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನೀನಾದೆ ನಾ ಸೀರಿಯಲ್ ತನ್ನದೇ ಆದ ಪ್ರೇಕ್ಷಕ ಬಳಗವನ್ನು ಹೊಂದಿದ್ದು, ಈ ಧಾರವಾಹಿ ಸೂಪರ್ ಹಿಟ್ ಧಾರವಾಹಿಗಳಲ್ಲಿ ಒಂದಾಗಿದೆ.

ಒರಟ ಸ್ವಭಾವದ ನಾಯಕನಾಗಿ ದಿಲೀಪ್ ಆರ್ ಶೆಟ್ಟಿ ಹಾಗೂ ನಾಯಕಿಯಾಗಿ ಖುಷಿ ಶಿವು ನಟಿಸುತ್ತಿದ್ದಾರೆ. ಇಬ್ಬರೂ ಧಾರವಾಹಿಯಲ್ಲಿ ಗಂಡ-ಹೆಂಡತಿಯ ಪಾತ್ರ ಮಾಡುತ್ತಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಎಷ್ಟು ಚೆನ್ನಾಗಿ ಬಂದಿದೆಯೆಂದರೆ ನಿಜ ಜೀವನದಲ್ಲೂ ಒಂದಾಗಿ ಅಭಿಮಾನಿಗಳು ಬಯಸುತ್ತಿದ್ದಾರೆ.

ಆದರೆ ಇಬ್ಬರ ನಡುವಿನ ಸ್ನೇಹ ನೋಡಿದರೆ ಇವರಿಬ್ಬರೂ ಪರಸ್ಪರ ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ದಿಲೀಪ್ ತೆಲುಗು ಧಾರವಾಹಿಯೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಖುಷಿಯನ್ನು ದಿಲೀಪ್ ಅವರ ವಿಶೇಷ ಸ್ನೇಹಿತೆ ಎಂದು ಕರೆಸಲಾಗಿತ್ತು. ಆಗಲೇ ಇಬ್ಬರ ನಡುವಿನ ಗೆಳೆತನದ ಬಗ್ಗೆ ಎಲ್ಲರಿಗೂ ಅನುಮಾನ ಮೂಡಿತ್ತು. ಅಲ್ಲದೆ ಇತ್ತೀಚೆಗೆ ಇಬ್ಬರೂ ಜೊತೆಯಾಗಿ ಯೂ ಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದಾರೆ.

ಆದರೆ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲೇ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರನ್ನೂ ಮಾತನಾಡಿಸುವಾಗ ನಿರೂಪಕಿ ಅನುಪಮಾ ಗೌಡ ವಿಶೇಷ ಸ್ನೇಹಿತೆ ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಇದಕ್ಕೆ ಇಬ್ಬರೂ ನಾಚಿಕೊಂಡಿದ್ದಾರೆ. ಆಕೆ ನಿಮಗೆ ಯಾಕೆ ಇಷ್ಟವಾಗುತ್ತಾರೆ ಎಂದು ಕೇಳಿದಾಗ ನನ್ನ ಏನೇ ಕಷ್ಟ-ಸುಖ ಇದ್ದರೂ ಆಕೆಯೊಂದಿಗೆ ಹಂಚಿಕೊಳ್ಳುತ್ತೇನೆ. ಆಕೆಯೂ ನನ್ನ ಜೊತೆ ಹಂಚಿಕೊಳ್ಳುತ್ತಾಳೆ ಎಂದಿದ್ದಾರೆ. ಇತ್ತ ಖುಷಿ ಕೂಡಾ ಮೊದಲು ಈತನಿಗೆ ಆಟಿಟ್ಯೂಡ್ ಜಾಸ್ತಿ ಎಂದುಕೊಂಡಿದ್ದೆ. ಆದರೆ ಈಗ ನನ್ನ ವಿಶೇಷ ಗೆಳೆಯ ಎಂದಿದ್ದಾರೆ. ಇವರಿಬ್ಬರ ಸಂಭಾಷಣೆ ಕೇಳಿದಾಗ ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಗೆಳೆತನವಿದೆ ಎಂದು ನೆಟ್ಟಿಗರು ಊಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ದರ್ಶನ್ ಪರ ಅಖಾಡಕ್ಕಿಳಿದ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಕಳುಹಿಸಿದ್ರು ಸ್ಪಷ್ಟ ಸಂದೇಶ

ಬಿಗ್‌ಬಾಸ್‌ ವಿನ್ನರ್‌, ಯುಟ್ಯೂಬರ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳಿಂದ ಗುಂಡಿನ ಮಳೆ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಮುಂದಿನ ಸುದ್ದಿ
Show comments