Select Your Language

Notifications

webdunia
webdunia
webdunia
webdunia

ಮಹೇಶ್ ಬಾಬು ‘ಸರ್ಕಾರು ವಾರಿ ಪಾಟಾ’ ಚಿತ್ರದಲ್ಲಿ ನಟಿಸಲಿದ್ದಾರಾ ಅನುಷ್ಕಾ?

webdunia
  • facebook
  • twitter
  • whatsapp
share
ಸೋಮವಾರ, 23 ನವೆಂಬರ್ 2020 (14:30 IST)
ಹೈದರಾಬಾದ್ : ಸೂಪರ್ ಸ್ಟಾರ್ ಮಹೇಶ್ ಬಾಬು, ಪರಶುರಾಮ್ ಅವರ ಕಾಂಬೊ ಚಿತ್ರ ‘ಸರ್ಕಾರು ವಾರಿ ಪಾಟಾ’ ಚಿತ್ರದ ಶೂಟಿಂಗ್ ಇತ್ತೀಚೆಗೆ ಪ್ರಾರಂಭವಾಗಿದೆ. ಇದರಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ಆಯ್ಕೆಯಾಗಿದ್ದಾರೆ. ಈ ನಡುವೆ ಇದೀಗ ಮತ್ತೊಬ್ಬ ನಟಿಯ ಹೆಸರು ಕೇಳಿಬರುತ್ತಿದೆ.

ಹೌದು. ಕಳೆದ ಎರಡು, ಮೂರು ದಿನಗಳಿಂದ ಅನುಷ್ಕಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಮಹೇಶ್ ಬಾಬು ಹಾಗೂ ಅನುಷ್ಕಾ ಈ ಹಿಂದೆ ಕಾಲೇಜ್ ಚಿತ್ರದಲ್ಲಿ ನಟಿಸಿದ್ದರು. ಆ ಮೇಲೆ ಮತ್ತೆ ಅವರು ಒಟ್ಟಿಗೆ ನಟಿಸಲಿಲ್ಲ.. ಇದೀಗ ಮತ್ತೆ ನಟಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದ್ದು, ಹೆಚ್ಚಿನವರು ಅನುಷ್ಕಾ ಇತರ ನಾಯಕರ ಚಿತ್ರಗಳಲ್ಲಿ ಮುಖ್ಯ ಪಾತ್ರ ಮಾಡುವ ಬದಲು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುವುದು ಸೂಕ್ತ ಎನ್ನುತ್ತಿದ್ದಾರೆ.  

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ತಮ್ಮ ಸಿನಿಮಾಕ್ಕೆ ಸಂಬಂಧಿಸಿದ ಫೋಟೊಗಳನ್ನು ಸಾಮಾಜಿಕ ಜಾಲತಾಣದ ಸೈಟ್ ನಿಂದ ತೆಗೆದುಹಾಕಿದ ನಟಿ