ಮಗನ ಆಗಮನದ ನಂತರ ಕೂದಲಿಗೆ ನ್ಯೂ ಲುಕ್‌ ಕೊಟ್ಟ ಅನುಷ್ಕಾ ಶರ್ಮಾ

sampriya
ಮಂಗಳವಾರ, 21 ಮೇ 2024 (17:33 IST)
Photo By Instagram
ಮುಂಬೈ: ಫೆಬ್ರವರಿಯಲ್ಲಿ ಮಗು ಅಕಾಯ್‌ನನ್ನು ಸ್ವಾಗತಿಸಿದ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ಈಚೆಗೆ ನ್ಯೂ ಹೇರ್‌ ಸ್ಟೈಲ್‌ ಲುಕ್‌ನಲ್ಲಿ ಪೋಸ್‌ ನೀಡಿದ್ದಾರೆ.  ಹೌದು ನಟಿ ಅನುಷ್ಕಾ ಶರ್ಮಾ ಅವರು ಹೊಸ ಕೇಶವಿನ್ಯಾಸದಲ್ಲಿ ತಮ್ಮ ಹೇರ್‌ ಸ್ಟೈಲಿಸ್ಟ್‌ ರಶೀದ್‌ ಜತೆಗೆ ಫೋಟೋಗೆ ಫೋಸ್‌ ನೀಡಿದ್ದಾರೆ.

ಅನುಷ್ಕಾ ಹೊಸ ಕೇಶ ವಿನ್ಯಾಸವನ್ನು ತೋರಿಸಿದ್ದಾರೆ

ರಶೀದ್ ಕ್ಲಿಕ್ಕಿಸಿದ ಸೆಲ್ಫಿಗಳಲ್ಲಿ, ನನಗೆ ಸ್ಟೈಲಿಸ್‌ ಹಾಗೂ ಸುಂದರವಾಗಿರುವ ಅನುಷ್ಕಾ ಶರ್ಮಾ ಅವರಿಗೆ ಹೇರ್‌ ಕಟ್‌ ಮಾಡುವ ಅವಕಾಶ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.

ಫೋಟೊ ನೋಡಿ ಪ್ರತಿಕ್ರಿಯಿಸಿದ ಅಭಿಮಾನಿಗಳು, "ಈ ಸುಂದರ ಮುಖವು ಸುಂದರವಾದ ನಗುವನ್ನು ಹೊಂದಿದೆ, ಜೊತೆಗೆ ಹೊಳೆಯುವ ಚರ್ಮ ಮತ್ತು ಹೊಳೆಯುವ ಕಣ್ಣುಗಳು. ಅನುಷ್ಕಾ ಶರ್ಮಾ ಸುಂದರ, ಸುಂದರ ಮಹಿಳೆ.",  ಇನ್ನೊಬ್ಬ ವ್ಯಕ್ತಿ, "ಅವಳು ತುಂಬಾ ಮುದ್ದಾಗಿದ್ದಾಳೆ" ಎಂದು ಹೇಳಿದರು. "ಎಂತಹ ಒಳ್ಳೆಯ ವ್ಯಕ್ತಿ. ಅದು ಅವಳ ಮುಖದ ಮೇಲೆ ಪ್ರತಿಫಲಿಸುತ್ತದೆ. ಆಶೀರ್ವದಿಸಿರಿ" ಎಂದು Instagram ಬಳಕೆದಾರರು ವಿಧ ವಿಧದಲ್ಲಿ ಕಮೆಂಟ್ ಮಾಡಿದ್ದಾರೆ.

ಅನುಷ್ಕಾ ಮತ್ತು ವಿರಾಟ್ ಈ ವರ್ಷದ ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ತಮ್ಮ ಎರಡನೇ ಮಗು ಅಕಾಯ್ ಅವರನ್ನು ಸ್ವಾಗತಿಸಿದರು. 2017 ರಲ್ಲಿ ವಿರಾಟ್‌ ಹಾಗೂ ಅನುಷ್ಕಾ ಅವರು ದಾಂಪತ್ಯ ಜೀವನಕ್ಕೆ ಕಾಲೀಟ್ಟರು. 2021ರಲ್ಲಿ ಈ ಸ್ಟಾರ್‌ ಜೋಡಿ ಮಗಳು ವಾಮಿಕಾ ಹಾಗೂ 2024ರಲ್ಲಿ ನಗ ಅಕಾಯ್‌ ಸ್ವಾಗತಿಸಿದರು.

ಮಗನ ಜನನದ ನಂತರ ಮೊದಲ ಬಾರೀ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಜತೆ ಬರ್ತಡೇ ಆಚರಿಸಿದ ಅನುಷ್ಕಾ ಅವರು ಮೊನ್ನೆ ನಡೆದ ಐಪಿಎಪ್‌ ಪ್ಲೇ ಆಪ್‌ ಕ್ರಿಕೆಟ್‌ ಪಂದ್ಯಾದಲ್ಲಿ ಅಧಿಕೃತವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಪುನೀತ್ ರಾಜ್ ಕುಮಾರ್ ನಾಲ್ಕನೇ ಪುಣ್ಯ ತಿಥಿ: ಅಪ್ಪು ನೆನಪಿನಲ್ಲಿ ಅಶ್ವಿನಿ ಪುನೀತ್ ಹೇಳಿದ್ದೇನು

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ಮುಂದಿನ ಸುದ್ದಿ
Show comments