Select Your Language

Notifications

webdunia
webdunia
webdunia
webdunia

ವಿರಾಟ್ ಮಡದಿಗೆ ಬರ್ತಡೇ ಸಂಭ್ರಮ: ಬೆಂಗಳೂರಿನಲ್ಲಿ ಆರ್‌ಸಿಬಿ ಆಪ್ತರಿಗೆ ಪಾರ್ಟಿ ಕೊಟ್ಟ ಕೊಹ್ಲಿ

ವಿರಾಟ್ ಮಡದಿಗೆ ಬರ್ತಡೇ ಸಂಭ್ರಮ: ಬೆಂಗಳೂರಿನಲ್ಲಿ ಆರ್‌ಸಿಬಿ ಆಪ್ತರಿಗೆ ಪಾರ್ಟಿ ಕೊಟ್ಟ ಕೊಹ್ಲಿ

Sampriya

ಬೆಂಗಳೂರು , ಶುಕ್ರವಾರ, 3 ಮೇ 2024 (14:26 IST)
Photo Courtesy Instagram
ಬೆಂಗಳೂರು:  36ನೇ ವರ್ಷಕ್ಕೆ ಕಾಲಿಟ್ಟ ನಟಿ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಕೆಲ ಆಪ್ತರೊಂದಿಗೆ  ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರು ತಮ್ಮ ಇನ್‌ಸ್ಟಾಗ್ರಾಂ  ಸ್ಟೋರಿಯಲ್ಲಿ ಅನುಷ್ಕಾ ಬರ್ತಡೇ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ವಿರಾಟ್ ಅವರು ತಮ್ಮ ಪತ್ನಿಯ ಭುಜದ ಮೇಲೆ ಕೈಯಿಟ್ಟು ತನ್ನ ಆಪ್ತ ಬಳಗದ ಜತೆ ಫೋಟೋಗೆ ಫೋಸ್ ನೀಡಿದ್ದಾರೆ.

ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ ಅವರೊಂದಿಗೆ ಬರ್ತಡೇ ಆಚರಿಸಿಕೊಂಡರು.

"ಉತ್ತಮ ಜನರೊಂದಿಗೆ ಉತ್ತಮ ರಾತ್ರಿ ಕಳೆದಿದೆ" ಎಂದು ಫಾಫ್ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.

ಮ್ಯಾಕ್ಸ್‌ವೆಲ್ ಅದೇ ಚಿತ್ರವನ್ನು ಮರು ಪೋಸ್ಟ್ ಮಾಡಿದ್ದಾರೆ. ಅನುಷ್ಕಾ ಹುಟ್ಟುಹಬ್ಬದ ಮತ್ತೊಂದು ಚಿತ್ರವೂ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಹೆಸರಾಂತ ಬಾಣಸಿಗ ಮನು ಚಂದ್ರ ಅವರು ಹಂಚಿಕೊಂಡಿದ್ದು, ಚಿತ್ರದಲ್ಲಿ ಅನುಷ್ಕಾ ಮತ್ತು ವಿರಾಟ್ ಅವರು ಗುಂಪಿನೊಂದಿಗೆ ಪೋಸ್ ನೀಡುತ್ತಿರುವಾಗ ನಗುವನ್ನು ಹಂಚಿಕೊಳ್ಳುತ್ತಿದ್ದಾರೆ.

"ಹೊಳೆಯುವ ಸಂತೋಷದ ಜನರು + ಒಳ್ಳೆಯ ಆಹಾರ = ಸಂತೋಷ. ಅಂತಹ ಸುಂದರವಾದ ಸಂಜೆ ಇದು, ಶ್ರೇಷ್ಠ ನೊಶ್‌ನ ಅನ್ವೇಷಣೆಗಾಗಿ ಈ ಸಂಪೂರ್ಣ ಪ್ರೀತಿಗಾಗಿ ಉತ್ತಮವಾಗಿದೆ. ಜನ್ಮದಿನದ ಶುಭಾಶಯಗಳು @anushkasharma," ಎಂದು ಬಾಣಸಿಗ ಮನು ಚಂದ್ರ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನ್ ರಾಯಲ್ಸ್ ನಿಂದ ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್