Select Your Language

Notifications

webdunia
webdunia
webdunia
webdunia

ನವರಾತ್ರಿ ಸಂಭ್ರಮದಂದು ಸ್ವಂತ ಐಷರಾಮಿ ಮನೆಗೆ ಕಾಲಿಟ್ಟ ಅನುಪಮ ಗೌಡ

ನವರಾತ್ರಿ ಸಂಭ್ರಮದಂದು ಸ್ವಂತ ಐಷರಾಮಿ ಮನೆಗೆ ಕಾಲಿಟ್ಟ ಅನುಪಮ ಗೌಡ

Sampriya

ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2024 (17:34 IST)
Photo Courtesy X
'ಅಕ್ಕ' ಸೀರಿಯಲ್ ಮೂಲಕ ಹೆಸರು ಗಳಿಸಿ, ಬಿಗ್‌ಬಾಸ್‌ನಿಂದ ಫೇಮಸ್ ಆಗಿ, ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಿರೂಪಕರಲ್ಲಿ ಒಬ್ಬರಾಗಿರುವ ಅನುಪಮಾ ಗೌಡ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

ಇದಕ್ಕೆ ಕಾರಣ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಅನುಪಮಾ ಗೌಡ ಅವರು ಹೊಸ ಮನೆಗೆ ಕಾಲಿಟ್ಟು ಸಂಭ್ರಮಿಸಿದ್ದಾರೆ. ಖರೀದಿಸಿದ ಐಷರಾಮಿ ಮನೆಯ ಗೃಹಪ್ರವೇಶವನ್ನು ಅನುಪಮಾ ಗೌಡ ಅವರು ಈಚೆಗೆ ಅದ್ಧೂರಿಯಾಗಿ ನೆರವೇರಿಸಿದರು. ಇದರಿಂದ ಹಲವು ವರ್ಷಗಳ ಕನಸು ನನಸಾಗಿದೆ.

ಅನುಪಮಾ ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ಕಿರುತೆರೆ ನಟ-ನಟಿಯರು ಹಾಜರಿದ್ದರು. ಇನ್ನು ಕನಸಿನ ಮನೆಗೆ ಅನುಪಮ ಅವರು 'ನಮ್ಮನೆ' ಎಂದು ಹೆಸರಿಟ್ಟಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಕಿಸನ್, ದಿವ್ಯಾ ಉರುಡುಗ, ನಟಿ ಅನುಪ್ರಭಾಕರ್, ನೇಹಾ ಗೌಡ, ಕಾರ್ತಿಕ್ ಮಹೇಶ್ ಸೇರಿದಂತೆ ಅನೇಕ ನಟ ನಟಿಯರು ಭಾಗವಹಿಸಿದರು.

ಈ ಪೋಟೋಗಳನ್ನು ದಿವ್ಯಾ ಉರುಡುಗ ಅವರು ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ತಮ್ಮ ಸ್ನೇಹಿತೆಗೆ ಶುಭಕೋರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆ ಮೇಲೆ ದಾಳಿ, ಕ್ರೇನ್ ತಂದು ಎಲ್ಲವನ್ನೂ ಹೊತ್ತೊಯ್ದ ಆಗಂತುಕರು