Select Your Language

Notifications

webdunia
webdunia
webdunia
webdunia

Chef ಚಿದಂಬರನಿಗಾಗಿ ರಾಪ್ ಶೈಲಿಯ ಹಾಡು ಹಾಡಿದ ನಟ ಅನಿರುದ್ಧ್ ಜತ್ಕಾರ್

Aniruddh Jathkar

Krishnaveni K

ಬೆಂಗಳೂರು , ಶನಿವಾರ, 11 ಮೇ 2024 (12:47 IST)
ಬೆಂಗಳೂರು: ನಟ ಅನಿರುದ್ಧ್ ಜತ್ಕಾರ್ ನಾಯಕರಾಗಿರುವ Chef ಚಿದಂಬರ ಸಿನಿಮಾದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡಿಗೆ ಅನಿರುದ್ಧ್ ಅವರೇ ಧ್ವನಿ ನೀಡಿರುವುದು ವಿಶೇಷ.

ಅನಿರುದ್ಧ್ ಜತ್ಕಾರ್ ನಟನಗೆ ಜೊತೆಗೆ ಗಾಯಕರೂ ಹೌದು. ಸ್ನೇಹಲೋಕ ಕರೋಕೆ ಕ್ಲಬ್ ನಲ್ಲಿ ಹಳೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿರುತ್ತಾರೆ. ಶಾಸ್ತ್ರೀಯವಾಗಿಯೂ ಸಂಗೀತವನ್ನು ಅಭ್ಯಾಸ ಮಾಡಿದವರು. ಆದರೆ ಚಿದಂಬರ ಸಿನಿಮಾಗಾಗಿ ಅವರು ಹಾಡಿದ ಹಾಡು ವಿಭಿನ್ನವಾಗಿದೆ.

ಇಷ್ಟು ದಿನ ಮೆಲೊಡಿ ಹಾಡು ಹಾಡುತ್ತಿದ್ದ ಅನಿರುದ್ಧ್ ಇದೀಗ ತಮ್ಮ ಸಿನಿಮಾಗಾಗಿ ರಾಪ್ ಶೈಲಿಯ ಹಾಡು ಹಾಡಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಿರುವ ಶ್ರೀಗಣೇಶ್ ಪರಶುರಾಮ್ ಬರೆದ ಹಾಡನ್ನು ಅನಿರುದ್ಧ್ ಮತ್ತು ಸಂಗಡಿಗರು ಹಾಡಿದ್ದಾರೆ. ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಜನರಿಗೆ ಈ ಹೊಸ ಶೈಲಿಯ ಹಾಡು ಮೆಚ್ಚುಗೆಗೆ ಪಾತ್ರವಾಗಿದೆ.

Chef ಚಿದಂಬರ ಸಿನಿಮಾದಲ್ಲಿ ಅನಿರುದ್ಧ್ ಜತ್ಕಾರ್ ನಾಯಕರಾದರೆ ನಿಧಿ ಸುಬ್ಬಯ್ಯ, ರಚೇಲ್ ಡೇವಿಡ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಂ. ಆನಂದ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಾಮಿಡಿ ಮತ್ತು ಥ್ರಿಲ್ಲರ್ ಕತಾಹಂದರ ಹೊಂದಿರುವ ಸಿನಿಮಾ ಇದಾಗಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಒಂದು ಟೀಸರ್ ಮತ್ತು ಒಂದು ಟೈಟಲ್ ಹಾಡು ಮಾತ್ರ ಬಿಡುಗಡೆ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ಸಂಕಷ್ಟದಲ್ಲಿದ್ದ ಪದ್ಮಶ್ರೀ ವಿಜೇತ ಮೊಗಿಲಯ್ಯಗೆ ನಟಿ ಜ್ಯೋತಿ ರೈ ಸಹಾಯ