Photo Courtesy: Instagram
ಬೆಂಗಳೂರು: ಇತ್ತೀಚೆಗೆ ಅಶ್ಲೀಲ ವಿಡಿಯೋ ಪ್ರಕರಣದಿಂದ ಸುದ್ದಿಯಾಗಿದ್ದ ನಟಿ ಜ್ಯೋತಿ ರೈ ಈಗ ಆರ್ಥಿಕ ಸಂಕಷ್ಟದಲ್ಲಿದ್ದ ಪದ್ಮಿಶ್ರೀ ಮೊಗಿಲಯ್ಯಗೆ ಸಹಾಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ತಮ್ಮ ಅಶ್ಲೀಲ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಜ್ಯೋತಿ ರೈ ಬೇಸರಕ್ಕೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರು ಪೊಲೀಸರಿಗೂ ದೂರು ನೀಡಿದ್ದರು. ಇದರ ಬೆನ್ನಲ್ಲೇ ಅವರು ಮೊಗಿಲಯ್ಯಗೆ ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರಿಂದ ಗಾರೆ ಕೆಲಸ ಮಾಡುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೊಗಿಲಯ್ಯ ಪರಿಸ್ಥಿತಿಗೆ ಅನೇಕರು ಮರುಗಿದ್ದರು. ಆದರೆ ಈಗ ಜ್ಯೋತಿ ರೈ ಸಹಾಯ ಹಸ್ತ ಚಾಚಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡಿದ್ದಾರೆ. ಅಕ್ಷಯ ತೃತೀಯ ದಿನ ನಾನು ಜಾನಪದ ಕಲಾವಿದ ಪದ್ಮಶ್ರೀ ಮೊಗಿಲಯ್ಯ ಅವರಿಗೆ ರೂ.50,000 ಗಳನ್ನು ನೀಡಿದೆ. ನನ್ನ ಪಿಆರ್ ಮೂಲಕ ಅವರ ಆರ್ಥಿಕ ಸಂಕಷ್ಟದ ಬಗ್ಗೆ ಮಾಹಿತಿ ಸಿಕ್ಕಿತು. ವೈಯಕ್ತಿಕವಾಗಿ ನಾನೇ ಸಂಕಷ್ಟದಲ್ಲಿದ್ದರೂ ಮೊಗಿಲಯ್ಯ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಅನಿಸಿತು. ಹೀಗಾಗಿ ಅವರನ್ನು ಮನೆಗೆ ಭೋಜನಕ್ಕೆ ಕರೆಸಿ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ನಿಮ್ಮಲ್ಲೂ ಯಾರಿಗಾದರೂ ಸಹಾಯ ಮಾಡಬೇಕೆನಿಸಿದರೆ ಮಾಡಬಹುದು. ಈ ವಿಡಿಯೋ ವೈರಲ್ ಆಗುವಂತೆ ಮಾಡಿ ಎಲ್ಲರಿಗೂ ಸಹಾಯ ಮಾಡಲು ಅನುಕೂಲವಾಗಲಿ ಎಂದಿದ್ದಾರೆ.
ಜ್ಯೋತಿ ರೈ ಸಹಾಯಕ್ಕೆ ಭಾವುಕರಾದ ಮೊಗಿಲಯ್ಯ ಅವರಿಗೆ ಕಾಲು ಹಿಡಿದು ನಮಸ್ಕರಿಸಲು ಮುಂದಾಗಿದ್ದಾರೆ. ಈ ವೇಳೆ ಜ್ಯೋತಿ ರೈ ಕೂಡಾ ಭಾವುಕರಾಗಿದ್ದಾರೆ.