Webdunia - Bharat's app for daily news and videos

Install App

ಅನುಶ್ರೀಗೆ ತಾಳಿ ಕಟ್ಟುವಾಗ ಕನ್ ಫ್ಯೂಸ್ ಆದ ರೋಷನ್: ಗಂಡನಿಗೆ ಗೈಡ್ ಮಾಡಿದ ಅನುಶ್ರೀ

Krishnaveni K
ಗುರುವಾರ, 28 ಆಗಸ್ಟ್ 2025 (12:04 IST)
Photo Credit: Instagram
ಬೆಂಗಳೂರು: ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಕೊನೆಗೂ ಆಂಕರ್ ಅನುಶ್ರೀ ಮದುವೆ ನಡೆದಿದೆ. ಇಂದು ಗೆಳೆಯ ರೋಷನ್ ಜೊತೆ ಆಪ್ತರ ಸಮ್ಮುಖದಲ್ಲಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಗ್ಗಲೀಪುರ ಬಳಿ ರೆಸಾರ್ಟ್ ಒಂದರಲ್ಲಿ ಅನುಶ್ರೀ ಮದುವೆ ಕಾರ್ಯಕ್ರಮ ನೆರವೇರಿದೆ. ಇಂದು 10.56 ರ ಸುಮೂಹರ್ತದಲ್ಲಿ ರೋಷನ್-ಅನುಶ್ರೀ ಸತಿಪತಿಗಳಾಗಿದ್ದಾರೆ. ತಾಳಿ ಕಟ್ಟುವ ಶಾಸ್ತ್ರದ ವೇಳೆ ರೋಷನ್ ತಾಳಿ ಸರ ಹಿಡಿದುಕೊಳ್ಳಲು ಕೊಂಚ ಕನ್ ಫ್ಯೂಸ್ ಆದರು. ಆಗ ಅನುಶ್ರೀಯೇ ಗಂಡನ ಕೈ ಹಿಡಿದು ಹೇಗೆ ಹಿಡಿಯಬೇಕು ಎಂದು ಹೇಳಿದ್ದು ಅಲ್ಲಿದ್ದವರ ಮುಖದಲ್ಲೂ ನಗು ಮೂಡಿದೆ.

ತಾಳಿ ಕಟ್ಟಿದಾಗ ಭಾವುಕರಾಗಿ ಅನುಶ್ರೀ ಕಣ್ಣೀರು ಹಾಕಿದ್ದಾರೆ. ಈ ಮದುವೆಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೂ ಬಂದು ಶುಭ ಹಾರೈಸಿದ್ದಾರೆ. ನಟ ಲವ್ಲಿ ಸ್ಟಾರ್ ಪ್ರೇಮ್, ಕಿಶೋರ್ ಕುಮಾರ್, ಶರಣ್, ಚೈತ್ರಾ ಜೆ ಆಚಾರ್, ಕಾವ್ಯಾ ಶಾ, ಗಾಯಕಿ ಪೃಥ್ವಿ ಭಟ್ ದಂಪತಿ ಸೇರಿದಂತೆ ಸಿನಿ ಸ್ನೇಹಿತರು ಬಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆಂಕರ್ ಅನುಶ್ರಿ ಮದುವೆ ಫೋಟೋಗಳು ಇಲ್ಲಿವೆ

ಅನುಶ್ರೀಗೆ ತಾಳಿ ಕಟ್ಟುವಾಗ ಕನ್ ಫ್ಯೂಸ್ ಆದ ರೋಷನ್: ಗಂಡನಿಗೆ ಗೈಡ್ ಮಾಡಿದ ಅನುಶ್ರೀ

ಕೆಜಿಎಫ್ ಚಾಚ ಹರೀಶ್ ರಾಯ್ ಗೆ ಕ್ಯಾನ್ಸರ್ ಉಲ್ಬಣ: ಸಹಾಯಕ್ಕಾಗಿ ಮೊರೆ

ಆಂಕರ್ ಅನುಶ್ರೀ ಅರಿಶಿನ ಶಾಸ್ತ್ರದ ಫೋಟೋ ವೈರಲ್: ಇಂದು ಮದುವೆ

ಡಿವೋರ್ಸ್ ವದಂತಿ ಬೆನ್ನಲ್ಲೇ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ನಟ ಗೋವಿಂದ ದಂಪತಿ

ಮುಂದಿನ ಸುದ್ದಿ
Show comments