ಅಪ್ಪು ಫೋಟೋ ಬರುತ್ತೆ ಗೋಳೋ ಅಂತ ಅಳ್ತಾರೆ: ಮದುವೆಯಾದ್ರೂ ಅನುಶ್ರೀಗೆ ತಪ್ಪಲಿಲ್ಲ ಟ್ರೋಲ್ ಕಾಟ

Krishnaveni K
ಶುಕ್ರವಾರ, 12 ಸೆಪ್ಟಂಬರ್ 2025 (15:16 IST)
ಬೆಂಗಳೂರು: ಆಂಕರ್ ಅನುಶ್ರೀ ಮದುವೆಯಾದ ಒಂದೇ ವಾರಕ್ಕೆ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಜೀ ಕನ್ನಡ ವಾಹಿನಿ ಅವರಿಗೆ ವಿಶೇಷವಾಗಿ ವೆಲ್ ಕಮ್ ಮಾಡಿದೆ. ಆದರೆ ಇಲ್ಲೂ ಅನುಶ್ರೀಗೆ ಟ್ರೋಲಿಗರ ಕಾಟ ತಪ್ಪಿಲ್ಲ.

ಜೀ ಕನ್ನಡ ವಾಹಿನಿಯ ಮನೆ ಮಗಳು ಅನುಶ್ರೀ. ಇದೀಗ ಮಹಾನಟಿ 2 ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಆಗಸ್ಟ್ 28 ಕ್ಕೆ ಅವರ ಮದುವೆಯಾಗಿತ್ತು.ಐಟಿ ಉದ್ಯೋಗಿ ರೋಷನ್ ಜೊತೆ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮದುವೆಯಾಗಿ ಎರಡು ವಾರ ಕಳೆದಿಲ್ಲ ಆಗಲೇ ಅನುಶ್ರೀ ಮತ್ತೆ ಶೋಗೆ ವಾಪಸ್ ಬಂದಿದ್ದಾರೆ. ಅನುಶ್ರೀ ಮದುವೆಯಾಗಿ ಶೂಟ್ ಮಾಡುತ್ತಿರುವ ಮೊದಲ ಎಪಿಸೋಡ್ ಎಂದರೆ ಕೇಳಬೇಕೇ? ಜೀ ವಾಹಿನಿ ಅವರನ್ನು ಮದುವೆಯಾಗಿ ಮತ್ತೆ ತವರಿಗೆ ಬಂದ ಮಗಳಂತೆ ಸನ್ಮಾನ ಮಾಡಿದೆ. ಈ ಪ್ರೋಮೋಗಳನ್ನು ವಾಹಿನಿ ಹಂಚಿಕೊಂಡಿದೆ.

ಆದರೆ ಈಗಲೂ ಅವರನ್ನು ಟ್ರೋಲಿಗರು ಬಿಟ್ಟಿಲ್ಲ. ಇಷ್ಟು ದಿನ ಅನುಶ್ರೀ ಮದುವೆ ಯಾವಾಗ ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದ ಜನ ಈಗ ಮದುವೆಯಾದ ಮೇಲೂ ಕಾಲೆಳೆದಿದ್ದಾರೆ. ಒಬ್ಬರಂತೂ ಈಗ ಅಪ್ಪು (ಪುನೀತ್ ರಾಜ್ ಕುಮಾರ್) ಫೋಟೋ ಹಾಕ್ತಾರೆ, ಗೋಳೋ ಅಂತಾರೆ ಎಂದು ಪ್ರೋಮೋಗೆ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಂತಹದ್ದೊಂದು ಸನ್ನಿವೇಶವಿರುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು ಎಂದಿದ್ದಾರೆ. ಇದಕ್ಕಾಗಿಯೇ ಕರಿಮಣಿ ಸರ ಹಾಕಿಕೊಂಡು ಬಂದಿದ್ದಾರಾ ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಇದರ ನಡುವೆಯೂ ಹಲವರು ನೀವು ಮನೆ ಮಗಳಿದ್ದಂತೆ ಎಂದು ಶುಭಾಶಯಗಳನ್ನೂ ಕೋರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments