Webdunia - Bharat's app for daily news and videos

Install App

Amina Nijam: ಆಪರೇಷನ್ ಸಿಂಧೂರ್ ಮಾಡಿದ್ದಕ್ಕೆ ಮಲಯಾಳಂ ನಟಿ ಅಮಿನಾಗೆ ಭಾರತೀಯಳಾಗಿ ನಾಚಿಕೆಯಾಗ್ತಿದೆಯಂತೆ

Krishnaveni K
ಗುರುವಾರ, 8 ಮೇ 2025 (14:23 IST)
Photo Credit: X
ಕೊಚ್ಚಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಿನ್ನೆ ನಡೆಸಿದ ಆಪರೇಷನ್ ಸಿಂಧೂರ್ ನನಗೆ ಭಾರತೀಯಳಾಗಿ ನಾಚಿಕೆಯಾಗ್ತಿದೆ ಎಂದು ಮಲಯಾಳಂ ನಟಿ ಅಮಿನಾ ಹೇಳಿಕೊಂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಪಹಲ್ಗಾಮ್ ನಲ್ಲಿ ಪಾಕ್ ಬೆಂಬಲಿತ ಉಗ್ರರು ಅಮಾಯಕ 26 ಪ್ರವಾಸಿಗರನ್ನು ಕೊಂದು ಹೆಣ್ಣು ಮಕ್ಕಳ ಕುಂಕುಮ ಅಳಿಯುವಂತೆ ಮಾಡಿದ್ದರು. ಇದಕ್ಕೆ ಇಡೀ ದೇಶವೇ ಪಾಕಿಸ್ತಾನವನ್ನು ಮುಗಿಸಿಬಿಡುವಷ್ಟು ಆಕ್ರೋಶದಲ್ಲಿತ್ತು.

ಆದರೆ ಭಾರತೀಯ ಸೇನೆ ಸಾಕಷ್ಟು ಯೋಜನೆ ರೂಪಿಸಿ ಉಗ್ರರ ಅಡಗುದಾಣಗಳನ್ನು ಗುರಿಯಾಗಿರಿಸಿ ದಾಳಿ ಮಾಡಿತ್ತು. ಇದರಲ್ಲಿ 100 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಆದರೆ ಈ ಘಟನೆ ಈ ಮಲಯಾಳಂ ನಟಿಗೆ ನಾಚಿಕೆಗೇಡಿನ ಸಂಗತಿಯಂತೆ.

ತನ್ನ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದುಕೊಂಡಿರುವ ಈಕೆ ‘ನನಗೆ ಭಾರತೀಯಳಾಗಿ ಈ ದಾಳಿ ಬಗ್ಗೆ ನಾಚಿಕೆಯಾಗ್ತಿದೆ. ಕೊಲ್ಲುವುದೇ ಎಲ್ಲದಕ್ಕೂ ಪರಿಹಾರವಲ್ಲ. ದೇಶದಲ್ಲಿ ಸಾಕಷ್ಟು ಉತ್ತರ ಸಿಗದ ಪ್ರಶ್ನೆಗಳಿರುವಾಗ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ನೆನಪಿರಲಿ ಯುದ್ಧ ಶಾಂತಿಯನ್ನು ತರುವುದಿಲ್ಲ. ನಾನು ಇದನ್ನು ಬೆಂಬಲಿಸುವುದಿಲ್ಲ. ಪಹಲ್ಗಾಮ್ ದಾಳಿಗೆ ಇದರಿಂದ ಪ್ರತೀಕಾರ ಮಾಡಿದಂತಾಯಿತು ಎನ್ನುವವರು ನಿಜಕ್ಕೂ ತಪ್ಪು ಕಲ್ಪನೆ ಹೊಂದಿದ್ದಾರೆ.  ಇದೊಂದು ನಾಗಿರಕರನ್ನು ಕಳೆದುಕೊಳ್ಳುವ ಯುದ್ಧ’ ಎಂದು ನಟಿ ಬರೆದುಕೊಂಡಿದ್ದಾಳೆ. ಆಕೆಯ ಪೋಸ್ಟ್ ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoora: ಪವಿತ್ರ ಸಿಂಧೂರಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಎಂದ ಕಿಚ್ಚ ಸುದೀಪ್

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

Indian Idol 12 winner ಪವನ್‌ದೀಪ್ ರಾಜನ್ ಸ್ಥಿತಿ ನೋಡಕ್ಕಾಗಲ್ಲ

Sonu Nigam: ಸೋನು ನಿಗಂ ವಿವಾದ ಇಫೆಕ್ಟ್: ಇನ್ನು ಕನ್ನಡ ಹಾಡು ಕೇಳಿದ್ರೆ ಗಾಯಕರು ತಕ್ಷಣವೇ ಹಾಡಬೇಕು

ಮುಂದಿನ ಸುದ್ದಿ
Show comments