Webdunia - Bharat's app for daily news and videos

Install App

ಅಲ್ಲು- ರಶ್ಮಿಕಾ ಕಾಂಬಿನೇಷನ್‌ನ ಪುಷ್ಪಾ 2 ಸಿನಿಮಾ ಎರಡನೇ ಹಾಡು ನಾಳೆ ರಿಲೀಸ್‌

sampriya
ಮಂಗಳವಾರ, 28 ಮೇ 2024 (14:54 IST)
Photo By Instagram
ಹೈದರಾಬಾದ್‌: ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್‌. ಅರ್ಜುನ್‌- ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ ಚಿತ್ರದ ಎರಡನೇ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್‌ ಆಗಿದೆ.

ಅರ್ಜುನ್‌- ರಶ್ಮಿಕಾ ಕಾಂಬಿನೇಷನ್‌ನ ಪ್ಯಾನ್‌ ಇಂಡಿಯಾ ಸಿನಿಮಾ ಪುಷ್ಪ 1  ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿತ್ತು. ಸುಕುಮಾರ್ ನಿರ್ದೇಶನದ ಪುಷ್ಪ 2 ಚಿತ್ರದ ಮೊದಲ ಹಾಡು ಈಗಾಗಲೇ ರಿಲೀಸ್‌ ಆಗಿ ಧೂಳೆಬ್ಬಿಸುತ್ತಿದೆ. ಅದರಲ್ಲಿಯೂ ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ.

ಇದೀಗ ರಿಲೀಸ್‌ ಆಗಲಿರುವ ಎರಡನೇ ಹಾಡಿನಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಇರಲಿದ್ದಾರೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ. ಈ ಬಗ್ಗೆ ರಶ್ಮಿಕಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ʼಪುಷ್ಪ 2ʼ ಚಿತ್ರದ ಎರಡನೇ ಹಾಡು ನಾಳೆ (ಮೇ 29) ಬೆಳಿಗ್ಗೆ 11.07ಕ್ಕೆ ರಿಲೀಸ್‌ ಆಗಲಿದೆ ಎಂದು ರಶ್ಮಿಕಾ ತಿಳಿಸಿದ್ದಾರೆ. ರಶ್ಮಿಕಾ ಮತ್ತು ಅಲ್ಲು ಅರ್ಜುನ್‌ ಫೋಸ್‌ ಕೊಡುತ್ತಿರುವ ಪೋಸ್ಟರ್‌ ಈಗಾಗಲೇ ಗಮನ ಸೆಳೆದಿದೆ. ಗುಲಾಬಿ ಬಣ್ಣ, ಹಲವು ಡ್ಯಾನ್ಸರ್‌ಗಳ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ನಗುತ್ತಾ ಪೋಸ್‌ ನೀಡಿದ್ದಾರೆ.  

ಈ ಹಾಡು 6 ಭಾಷೆಗಳಲ್ಲಿ ಮೂಡಿ ಬರಲಿದೆ. ಎಲ್ಲ ಭಾಷೆಗಳಲ್ಲಿಯೂ ಶ್ರೇಯಾ ಘೋಷಾಲ್‌ ಹಾಡಿಗೆ ಧ್ವನಿ ನೀಡುತ್ತಿರುವುದು ವಿಶೇಷ. ಸೂಸೆಕಿ (ತೆಲುಗು), ನೋಡೋಕ (ಕನ್ನಡ), ಅಂಗಾರೊನ್‌ (ಹಿಂದಿ), ಸೂಡಾನ (ತಮಿಳು), ಕಂಡಾಲೋ (ಮಲಯಾಳಂ) ಮತ್ತು ಆಗುನೆರ್‌ (ಬಂಗಾಳಿ) ಎಂದು ಆರಂಭವಾಗುವ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಿದ್ದಾರೆ.
ಪುಷ್ಪ 2 ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಸ್ಮಾರಕ ನೆಲಸಮ ಬೆನ್ನಲ್ಲೇ ಸಿಎಂ ಭೇಟಿಯಾದ ನಟ ಅನಿರುದ್ಧ್‌, ಯಾಕೆ ಗೊತ್ತಾ

ಮುಂಬೈನ ಪ್ರಸಿದ್ಧ ಲಾಲ್‌ಬೌಚಾ ರಾಜಾ ಪಾಂಡಲ್‌ಗೆ ನಟ ಸಿದ್ಧಾರ್ಥ್‌, ಜಾನ್ವಿ ಕಪೂರ್ ಭೇಟಿ

ಅನುಶ್ರೀ ಗಂಡ ನಿಜಕ್ಕೂ ಕೋಟ್ಯಾಧಿಪತಿನಾ, ಮದುವೆ ಬಳಿಕ ಬಯಲಾಯ್ತು ಸತ್ಯ

ಆಂಕರ್ ಅನುಶ್ರಿ ಮದುವೆ ಫೋಟೋಗಳು ಇಲ್ಲಿವೆ

ಅನುಶ್ರೀಗೆ ತಾಳಿ ಕಟ್ಟುವಾಗ ಕನ್ ಫ್ಯೂಸ್ ಆದ ರೋಷನ್: ಗಂಡನಿಗೆ ಗೈಡ್ ಮಾಡಿದ ಅನುಶ್ರೀ

ಮುಂದಿನ ಸುದ್ದಿ
Show comments