ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರ ವಹಿಸಿರುವ ಪುಷ್ಪ ಸಿನಿಮಾ ರಿಲೀಸ್ ಡೇಟ್ ನ್ನು ಚಿತ್ರತಂಡ ಪ್ರಕಟಿಸಿದೆ.
ಡಿಸೆಂಬರ್ 17 ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಈ ಮೊದಲು ಕ್ರಿಸ್ ಮಸ್ ಗೆ ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿಯಿತ್ತು. ಆದರೆ ಈಗ ಒಂದು ವಾರ ಮೊದಲೇ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಬಂದಿದೆ.
ಇನ್ನು, ಪುಷ್ಪ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗುತ್ತಿದ್ದಂತೇ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿದೆ.