Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ರಿಲೀಸ್ ಬಳಿಕ ಸೆಲೆಬ್ರೇಷನ್ ಬೇಕಿತ್ತಾ, ಕೇಳಿ ಬಂತು ಅಪಸ್ವರ

Allu Arjun

Krishnaveni K

ಹೈದರಾಬಾದ್ , ಭಾನುವಾರ, 15 ಡಿಸೆಂಬರ್ 2024 (10:09 IST)
ಹೈದರಾಬಾದ್: ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ತಮ್ಮ ಸಿನಿ ಸ್ನೇಹಿತರು, ಕುಟುಂಬಸ್ಥರ ಜೊತೆ ಸೆಲಬ್ರೇಷನ್ ಮಾಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿ ವೇಳೆ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ ಆಕೆಯ ಪುತ್ರ ಗಂಭೀರ ಗಾಯಗೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಲು ಅರ್ಜುನ್ ರನ್ನು ಬಂಧಿಸಲಾಗಿತ್ತು. ಬಂಧನವಾಗಿ ಒಂದೇ ದಿನದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಬಿಡುಗಡೆ ಬಳಿಕ ಅವರು ತಮ್ಮ ಮನೆಗೆ ಬಂದು ಕುಟುಂಬಸ್ಥರೊಂದಿಗೆ ಸಂಭ್ರಮಾಚರಿಸಿದ್ದಾರೆ. ಮಾಧ್ಯಮ ಗೋಷ್ಠಿ ನಡೆಸಿ ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ಸಿನಿ ಸ್ನೇಹಿತರೊಂದಿಗೆ ಅಲ್ಲು ಅರ್ಜುನ್ ಸಂಭ್ರಮಾಚರಿಸಿದ್ದರು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಅವರ ಭೇಟಿ  ವೇಳೆ ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಆಕೆಯ ಅಪ್ರಾಪ್ತ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸೆಲೆಬ್ರೇಷನ್ ಬೇಕಿತ್ತಾ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅಪಸ್ವರವೆತ್ತಿದ್ದಾರೆ. ಸ್ವಲ್ಪವಾದರೂ ಮಾನವೀಯತೆ ಬೇಡವೇ? ತಮ್ಮಿಂದಾಗಿ ಓರ್ವ ಆಸ್ಪತ್ರೆಯಲ್ಲಿ ಮಲಗಿಕೊಂಡಿರುವಾಗ ಇಂತಹ ಸಂಭ್ರಮಾಚರಣೆ ಯಾಕೆ ಬೇಕಿತ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಬ್ಬ: ಕಾರಣ ಇಲ್ಲಿದೆ