Publish Date: Mon, 08 Apr 2024 (07:48 IST)
Updated Date: Mon, 08 Apr 2024 (07:53 IST)
ಹೈದರಾಬಾದ್: ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಗೆ ಇಂದು ಜನ್ಮದಿನದ ಸಂಭ್ರಮ. ಅಲ್ಲು ಅರ್ಜುನ್ ಗೆ ಇಂದು 42 ನೇ ಜನ್ಮದಿನದ ಸಂಭ್ರಮ.
ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ತಂದೆ ಅಲ್ಲು ಅರವಿಂದ್ ಚಿತ್ರ ನಿರ್ಮಾಪಕ. ಹೀಗಾಗಿ ಅವರ ಸಿನಿಮಾ ಜೀವನ ಆರಂಭಕ್ಕೆ ಸುಲಭವಾಯಿತು. ಇದುವರೆಗೆ ಒಟ್ಟು 26 ಸಿನಿಮಾಗಳಲ್ಲಿ ನಟಿಸಿರುವ ಅಲ್ಲು ಅರ್ಜುನ್ ಈಗ ದೇಶದ ಶ್ರೀಮಂತ ನಟರಲ್ಲಿ ಒಬ್ಬರು.
ಅಲ್ಲು ಅರ್ಜುನ್ ಬಳಿಯಿರುವ ಮನೆ, ಕ್ಯಾರಾವ್ಯಾನ್ ಎಲ್ಲವೂ ದುಬಾರಿಯೇ. ಅವರ ಒಟ್ಟು ಆಸ್ತಿ ಮೌಲ್ಯ 500 ಕೋಟಿ ರೂ. ಅಧಿಕ ಎನ್ನಲಾಗಿದೆ. ಹೈದರಾಬಾದ್ ನಲ್ಲಿರುವ ಮನೆಯೇ ಅಂದಾಜು 100 ಕೋಟಿ ರೂ. ಬೆಲೆ ಬಾಳುತ್ತದೆ. ಅವರ ಕ್ಯಾರಾವ್ಯಾನ್ ಕೂಡಾ ಐಷಾರಾಮಿಯಾಗಿದ್ದು ಇದರ ಬೆಲೆ ಸುಮಾರು 7 ಕೋಟಿ ರೂ.ಗಳಷ್ಟು.
ಇದಲ್ಲದೆ ಅಲ್ಲು ಅರ್ಜುನ್ ಬಳಿ ದುಬಾರಿ ಕಾರುಗಳ ಸಂಗ್ರಹವೇ ಇದೆ. ರೋಲ್ಸ್ ರಾಯ್ಸ್ ಕಾರಿನಿಂದ ಹಿಡಿದು ಜಾಗ್ವಾರ್, ಬಿಎಂಡಬ್ಲ್ಲು, ರೇಂಜ್ ರೋವರ್, ಆಡಿ 7, ಮರ್ಸಿಡಸ್ ಬೆಂಜ್ ಸೇರಿದಂತೆ ದುಬಾರಿ ಕಾರುಗಳ ಸಂಗ್ರಹವೇ ಇದೆ. ಸ್ಟೈಲಿಶ್ ತಾರೆಯ ಜನ್ಮದಿನಕ್ಕೆ ನಮ್ಮ ಕಡೆಯಿಂದಲೂ ಒಂದು ಹ್ಯಾಪೀ ಬರ್ತ್ ಡೇ.