Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಬಂಧನದ ವೇಳೆ ಹೈಡ್ರಾಮಾ, ಪತ್ನಿ, ತಂದೆ ಕಣ್ಣೀರು: ವಿಡಿಯೋ

Allu Arjun

Krishnaveni K

ಹೈದರಾಬಾದ್ , ಶುಕ್ರವಾರ, 13 ಡಿಸೆಂಬರ್ 2024 (13:27 IST)
Photo Credit: X
ಹೈದರಾಬಾದ್: ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಷ್ಪ ನಟ ಅಲ್ಲು ಅರ್ಜುನ್ ರನ್ನು ಪೊಲೀಸರು ಬಂದಿಸುವ ವೇಳೆ ಹೈಡ್ರಾಮಾವೇ ನಡೆದಿದೆ.

ಅಲ್ಲು ಅರ್ಜುನ್ ಮನೆಗೆ ಬಂದ ಪೊಲೀಸರು ಇಂದು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಈ ವೇಳೆ ಅವರ ಮನೆ ಮುಂದೆ ಹೈಡ್ರಾಮಾವೇ ನಡೆದಿದೆ. ಅಲ್ಲು ಅರ್ಜುನ್ ರನ್ನು ಬಂಧಿಸಿ ಪೊಲೀಸರು ತಮ್ಮ ವಾಹನದಲ್ಲಿ ಕುಳ್ಳಿರಿಸಲು ಹೋದಾಗ ಅವರ ಪತ್ನಿ, ತಂದೆ ಸೇರಿದಂತೆ ಸಾಕಷ್ಟು ಜನ ಸೇರಿದ್ದರು.

ಕಣ್ಣೀರಿಡುತ್ತಿದ್ದ ಪತ್ನಿಯ ಕಣ್ಣೊರೆಸಿ ಮುತ್ತಿಕ್ಕಿದ ಅಲ್ಲು ಅರ್ಜುನ್ ಇನ್ನೇನು ಕಾರಿನಲ್ಲಿ ಕೂರಬೇಕು ಎಂದಾಗ ತಂದೆ ಅಲ್ಲು ಅರವಿಂದ್ ತಾವೇ ಕಾರಿನಲ್ಲಿ ಕೂತರು. ಆಗ ಅವರೆಲ್ಲರನ್ನೂ ಸಮಾಧಾನ ಮಾಡಿ ಏನೂ ಆಗಲ್ಲ ಎಂದು ಧೈರ್ಯ ಹೇಳಿ ಹಿಂದೆ ಕಳುಹಿಸಿಕೊಟ್ಟ ಅರ್ಜುನ್ ಪೊಲೀಸರ ಜೊತೆ ತೆರಳಿದ್ದಾರೆ.

ಕಾರಿನ ಹಿಂದೆಯೇ ಅವರ ಆಪ್ತರೂ ಓಡಿ ಹೋಗಿದ್ದಾರೆ. ಮೊನ್ನೆಯಷ್ಟೇ ಪುಷ್ಪ 2 ರಿಲೀಸ್ ವೇಳೆ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾಗ ಉಂಟಾಗಿದ್ದ ನೂಕು ನುಗ್ಗಲಿನಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದಳು. ಪ್ರಕರಣ ಸಂಬಂಧ ಅಲ್ಲು ವಿರುದ್ಧ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ ಅಲ್ಲು ಹಾಜರಾಗದ ಕಾರಣ ಪೊಲೀಸರು ಇಂದು ಅವರನ್ನು ಬಂಧಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

Allu Arjun arrest: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ರನ್ನು ಬಂಧಿಸಿದ ಪೊಲೀಸರು