Publish Date: Wed, 06 Dec 2017 (08:58 IST)
Updated Date: Wed, 06 Dec 2017 (09:07 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಅಕುಲ್ ಬಾಲಾಜಿಯವರು ಆಗಮಿಸಿದ್ದನ್ನು ಕಂಡು ಸ್ಪರ್ಧಿಗಳಿಗೆ ಖುಷಿ, ಸಡಗರವನ್ನುಂಟು ಮಾಡಿತ್ತು.
ಬಿಗ್ ಬಾಸ್ ನ ಸೀಸನ್ 2ರಲ್ಲಿ ನೂರು ದಿನ ಮನೆಯೊಳಗೆ ಇದ್ದು ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡ ಅಕುಲ್ ಬಾಲಾಜಿಯವರನ್ನು ಬಿಗ್ ಬಾಸ್ ಅತಿಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿದ್ದಾರೆ. ಮನೆಯೊಳಗೆ ಕಾಲಿಟ್ಟ ಅಕುಲ್ ಸ್ಪರ್ಧಿಗಳ ಪರಿಚಯವನ್ನು ಮಾಡಿಕೊಳ್ಳುತ್ತಾ ಅವರ ಮುಖದಲ್ಲಿ ನಗೆಯ ಹೊನಲನ್ನು ಹರಿಸಿದರು.
ಬಿಗ್ ಬಾಸ್ ಅಕುಲ್ ಅವರಿಗೆ ‘ಮಂತ್ರದಂಡ’ ಎಂಬ ಅಧಿಕಾರವನ್ನು ಕೊಟ್ಟು ಅದನ್ನು ನಿಮಗಿಷ್ಟ ಬಂದವರ ಮೇಲೆ ಪ್ರಯೋಗಿಸಲು ಹೇಳಿದರು.ಅದೇರೀತಿ ಅಕುಲ್ ರವರು ಅದನ್ನು ಸ್ಪರ್ಧಿಗಳ ಮೇಲೆ ಪ್ರಯೋಗಿಸುತ್ತಾ ಅವರಿಗೆಲ್ಲಾ ಕೆಲವು ಕೆಲಸಗಳನ್ನು ಕೊಟ್ಟರು. ಸ್ಪರ್ಧಿಗಳು ಕೂಡ ಅದನ್ನು ಗೌರವದಿಂದಲೆ ಪಾಲಿಸಿದರು. ಹಾಗೆ ಸ್ಪರ್ಧಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೇಳಿದರು. ಅದರಂತೆ ಸ್ಪರ್ಧಿಗಳು ತಮ್ಮ ಮನದಾಳದ ಮಾತುಗಳನ್ನು ಇತರರೊಡನೆ ಹಂಚಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ