Publish Date: Fri, 11 May 2018 (13:18 IST)
Updated Date: Fri, 11 May 2018 (13:20 IST)
ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೈ ಅವರು ಟ್ವಿಟ್ಟರಿನಲ್ಲಿ ಹೋಟೆಲ್ವೊಂದರ ಸಿಬ್ಬಂದಿ ಮೇಲೆ ಕಿಡಿಕಾರಿದ್ದಾರೆ.
ವಿಮಾನ ನಿಲ್ದಾಣದಲ್ಲಿರುವ ‘ಟಿಫೆನ್ ಸೆಂಟರ್ ರೆಸ್ಟೋರೆಂಟ್’ ವೊಂದಕ್ಕೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಉತ್ತಮ ಸೇವೆಗಳನ್ನು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಟಿ ಐಂದ್ರಿತಾ ರೈ ಅವರು ಟ್ವಿಟ್ಟರಿನಲ್ಲಿ,’ ಏರ್ ಪೋರ್ಟ್ನಲ್ಲಿರುವ ಟಿಫೆನ್ ಸೆಂಟರ್ ರೆಸ್ಟೋರೆಂಟ್ ಸಿಬ್ಬಂದಿ ತುಂಬ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಆಹಾರಕ್ಕಾಗಿ ಹಣ ನೀಡಿದ ಗ್ರಾಹಕರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹಣ ನೀಡಿದರು ಕಾಯುವಂತಾಗಿದೆ. ವಿಮಾನಕ್ಕೆ ವಿಳಂಬವಾದ್ದರೂ ತಿಂಡಿ ನೀಡಲು ತಡ ಮಾಡುತ್ತಿದ್ದಾರೆ. ಯಾರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಬರೆದಿದ್ದಾರೆ. ಆದರೆ ಯಾವ ರೆಸ್ಟೋರೆಂಟ್ ಎಂಬುದರ ಬಗ್ಗೆ ಐಂದ್ರಿತಾ ರೈ ಸ್ಪಷ್ಟನೆ ನೀಡಿಲ್ಲ.