ಚಿತ್ರಕಥಾ: ಚಿತ್ರದಿಂದೆದ್ದು ಕೊಲ್ಲಲು ಹವಣಿಸೋ ಅಘೋರಿ!

Webdunia
ಗುರುವಾರ, 11 ಜುಲೈ 2019 (14:03 IST)
ವಿಶಿಷ್ಟವಾದ ಕಥೆಯನ್ನು ಹೊಂದಿರುವ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣಲು ಸಜ್ಜುಗೊಂಡಿದೆ. ಯಶಸ್ವಿ ಬಾಲಾದಿತ್ಯ ನಿರ್ದೇಶನದ ಈ ಚೊಚ್ಚಲ ಚಿತ್ರದ ಮೂಲಕವೇ ಸುಜಿತ್ ರಾಥೋಡ್ ನಾಯಕನಾಗಿಯೂ ಎಂಟ್ರಿ ಕೊಡುತ್ತಿದ್ದಾರೆ. ಆರಂಭ ಕಾಲದಿಂದಲೂ ಪೋಸ್ಟರ್ಗಳ ಮೂಲಕವೇ ಜನರನ್ನು ಸೆಳೆಯುತ್ತಾ ಬಂದಿರೋ ಚಿತ್ರವಿದು. ಆ ನಂತರ ರೋರಿಂಗ್ ಸ್ಟಾರ್ ಬಿಡುಗಡೆಗೊಳಿಸಿದ್ದ ಟ್ರೈಲರ್ನಿಂದ ಚಿತ್ರಕಥಾ ಮತ್ತಷ್ಟು ರಂಗು ಪಡೆದುಕೊಂಡಿತ್ತು.
ಹೀಗೆ ಪ್ರತೀ ಹಂತದಲ್ಲಿಯೂ ಗಾಢ ಕುತೂಹಲವನ್ನು ಹರಡುತ್ತಾ ಸಾಗಿ ಬಂದಿರೋ ಚಿತ್ರಕಥಾ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಚಿತ್ರ. ಆದರೆ ಇದು ಆ ಜಾನರಿನಲ್ಲಿಯೇ ವಿಶೇಷವಾದ ಚಿತ್ರವೂ ಹೌದು. ಅದರಲ್ಲಿಯೂ ಈ ಸಿನಿಮಾದ ಕಥೆಯೇ ಸೊಗಸಾಗಿರೋ ಸುಳಿವನ್ನು ಚಿತ್ರತಂಡ ಬಿಟ್ಟು ಕೊಡುತ್ತದೆ. ಈ ಸಿನಿಮಾ ನಾಯಕ ಹರಸಾಹಸ ಪಟ್ಟು ಗುರಿಯ ನೇರದಲ್ಲಿರುವಾಗಲೇ ಅಪರಿಚಿತ ಕಲಾವಿದ ಬಿಡಿಸಿದ ಚಿತ್ರವೊಂದು ಕಣ್ಣಿಗೆ ಬೀಳುತ್ತೆ. ಆ ಚಿತ್ರ ಅಂತಿಮ ರೂಪ ಪಡೆಯುತ್ತಲೇ ಅಲ್ಲೊಂದು ಅಘೋರಿಯ ಚಿತ್ರ ಜೀವ ಪಡೆದಿರುತ್ತೆ.
 
ಹಾಗೆ ನಾಯಕ ಕ್ಯಾನ್ವಾಸಿನ ಮೇಲೆ ಚಿತ್ರವಾಗಿ ನೋಡಿದ್ದ ಅದೇ ಅಘೋರಿ ಅದೊಂದು ದಿನ ಎದುರಿಗೆ ಪ್ರತ್ಯಕ್ಷನಾಗಿ ಕೊಲ್ಲಲು ಹವಣಿಸುತ್ತಾನೆ. ಆ ನಂತರದಲ್ಲಿ ನಾಯಕ ಎಲ್ಲೇ ಹೋದರೂ ಈ ಅಘೋರಿ ನಾನಾ ರೀತಿಯಲ್ಲಿ ಕೊಲ್ಲಲು ಪ್ರಯತ್ನಿಸುತ್ತಲೇ ಸಾಗುತ್ತಾನೆ. ಆ ಅಘೋರಿ ಯಾರು, ಆತನೇಕೆ ನಾಯಕನನ್ನು ಕೊಲ್ಲಲು ನೋಡುತ್ತಾನೆ ಎಂಬುದರಿಂದ ಮೊದಲ್ಗೊಂಡು ಎಲ್ಲವೂ ಇಲ್ಲಿ ಕೌತುಕಗಳೇ. ಇಂಥಾ ಚಿತ್ರವಿಚಿತ್ರವಾದ ಪಾತ್ರಗಳೊಂದಿಗೆ, ಗಟ್ಟಿತನ ಹೊಂದಿದ ಕಥೆಯೊಂದಿಗೆ ಈ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಳ್ಳಲು ರೆಡಿಯಾಗಿದೆ. ಇಷ್ಟೂ ಕಾಲ ಈ ಚಿತ್ರದ ಬಗ್ಗೆ ಎದ್ದಿರೋ ಪ್ರಶ್ನೆಗಳಿಗೆಲ್ಲ ಇದೇ ಹನ್ನೆರಡನೇ ತಾರೀಕಿನಂದು ಉತ್ತರ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ರಾಜಕೀಯ ಗೆಲುವಿನೊಂದಿಗೆ ತನ್ನ ಸಿನಿಮಾ ಸಕ್ಸಸ್ ಖುಷಿ ಹಂಚಿಕೊಂಡ ನಟಿ ತ್ರಿಷಾ ಕೃಷ್ಣನ್

ದಿಲೀಪ್ ರಾಜ್ ಬೆನ್ನಲ್ಲೇ ಆಪ್ತ, ಬರಹಗಾರ ಟಿಜಿ ನಂದೀಶ್ ಹೃದಯಾಘಾತದಿಂದ ಸಾವು

ದೃಶ್ಯಂ 3 ನಾಳೆ ರಿಲೀಸ್: ಈ ಬಾರಿ ಕತೆ ಏನು

ಅನ್ಯಧರ್ಮೀಯನಾದರೇನು, ಮುಹೂರ್ತ ಪೂಜೆ ವೇಳೆ ನಟ ಫಹಾದ್ ಫಾಸಿಲ್ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ Video

ನಿಮಗೆ ನೀವೇ ಹೀರೋ ಆಗಿ: ಯುವತಿಯರಿಬ್ಬರ ವರದಕ್ಷಿಣೆ ಸಾವಿನ ಬಗ್ಗೆ ನಟಿ ಕಂಗನಾ ರನೌತ್

ಮುಂದಿನ ಸುದ್ದಿ
Show comments