ಮಗಳ ಆಗಮನದ ಖುಷಿಯ ಬೆನ್ನಲ್ಲೇ ಮತ್ತೊಂದು ಸಂಭ್ರಮ ಹಂಚಿಕೊಂಡ ಅದಿತಿ ಪ್ರಭುದೇವ

Sampriya
ಮಂಗಳವಾರ, 23 ಏಪ್ರಿಲ್ 2024 (19:37 IST)
photo Courtesy Instagram
ಬೆಂಗಳೂರು: ಯುಗಾದಿಯಂದು  ಹೆಣ್ಣು ಮಗುವಿಗೆ ಜನ್ಮ ನೀಡಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದ ನಟಿ ಅದಿತಿ ಪ್ರಭುದೇವ ಅವರು ತಮ್ಮ ಮುದ್ದಿನ ನಾಯಿ ಮರಿಯ ಹುಟ್ಟು ಹಬ್ಬವನ್ನು ಜೋರಾಗಿಯೇ ಆಚರಿಸಿದ್ದಾರೆ.

ಬಾಣಂತಿ ತನದ ಆರೈಕೆಯಲ್ಲಿರುವ ಅದಿತಿ ಅವರು ತಮ್ಮ ಮುದ್ದಿನ ನಾಯಿಮರಿಯ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡುವುದನ್ನು ಮರೆತಿಲ್ಲ. ಪತಿ ಯಶಸ್ ಜತೆ ಸೇರಿ ಡೆಕೋರೇಶನ್ ಮಾಡಿದ ಅದಿತಿ ಕೇಕ್ ಕಟ್ ಮಾಡಿ ತನ್ನ ಮುದ್ದಿನ ನಾಯಿಮರಿ ಚಾಕೋಲೇಟ್‌ಗೆ ತಿನ್ನಿಸಿದ್ದಾರೆ. ಈ ಕ್ಷಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಯುಟ್ಯೂಬ್ ಚಾನೆಲ್‌ನಲ್ಲಿ ಅದಿತಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬಕ್ಕೆ ಇನ್‌ಸ್ಟಾಗ್ರಾಂನಲ್ಲಿ ಶುಭಕೋರಿದ ಅವರು, ಹುಟ್ಟುಹಬ್ಬದ ಶುಭಾಶಯಗಳು ನನ್ನ ಮುದ್ದು ಮರಿ❤️ ನನ್ನ ಬದುಕಲ್ಲಿರುವ ಸುಂದರ ಸಂಭ್ರಮ ನೀನು❤️ Thank you Magale ಎಂದಿದ್ದಾರೆ.

ನನಗಿನ್ನೂ ನೆನಪಿದೆ ನನ್ನ ಬದುಕಿನ ಅತ್ಯಂತ ನೋವಿನ ಕ್ಷಣದಲ್ಲಿ ನಿನ್ನನ್ನು ಯಶಸ್ ತಂದುಕೊಟ್ಟರು. ಆ ಕ್ಷಣದಿಂದ ಇಲ್ಲಿಯವರೆಗೂ ನೀನು ನನಗೆ ಕೊಟ್ಟಿದ್ದು ಸಂತೋಷವನ್ನು ಮಾತ್ರ. ನನ್ನ ನೋವಲ್ಲಿ, ನಲಿವಲ್ಲಿ ಪ್ರತಿ ಕ್ಷಣದಲ್ಲೂ ಜೊತೆಯಾಗಿರುವ ಜೊತೆಗಾತಿ ನೀನು. ಅಷ್ಟೇ ಯಾಕೆ ನನ್ನ ಪ್ರೆಗ್ನೆನ್ಸಿ ಸಮಯದಲ್ಲೂ ಕೂಡ ಪ್ರತಿಕ್ಷಣವೂ ನನ್ನ ಜೊತೆಗಿದ್ದು ನನ್ನನ್ನು ಸಂತೋಷದಿಂದ ಉಲ್ಲಾಸದಿಂದ ಇರಿಸಿದ ನನ್ನ ಮುದ್ದು ಮಗಳು ನೀನು. ನಾನು ನಕ್ಕಾಗ ನನ್ನ ಸುತ್ತಲೂ ಜಿಗಿದಾಡುವ ಜೀವ ನೀನು. ಅತ್ತಾಗ ಕಣ್ಣೀರು ನೆಕ್ಕಿ ನೋಟದಲ್ಲೇ ಸಾಂತ್ವಾನ ಹೇಳುವ ಜೀವ ನೀನು.
ನನ್ನ ಬದುಕಿನ ಭಾಗವೇ ಆಗಿರುವ ನಿನಗೆ, ನಿನ್ನ ಹುಟ್ಟನ್ನು ಸಂಭ್ರಮಿಸುವ ಹೊರೆತು ನಾನೇನು ಮಾಡಲು ಸಾಧ್ಯ ಮಗಳೇ !!
ಹುಟ್ಟುಹಬ್ಬದ ಶುಭಾಶಯಗಳು ಚಾಕಲೇಟ್❤️ ಐ ಲವ್ ಯು<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments