ಶಿವಣ್ಣನ ಬಳಿಕ ಕನ್ನಡದ ಮತ್ತೊಬ್ಬ ನಟನೊಂದಿಗೆ ತೆರೆ ಹಂಚಿಕೊಳ್ಳಲಿರುವ ರಜನಿಕಾಂತ್‌

Sampriya
ಶನಿವಾರ, 24 ಆಗಸ್ಟ್ 2024 (18:48 IST)
Photo Courtesy X
ಬೆಂಗಳೂರು: ವರ್ಷದ ಹಿಂದೆ ಬಿಡುಗಡೆ ಆಗಿದ್ದ ಜೈಲರ್ ಸಿನಿಮಾನಲ್ಲಿ ರಜನಿಕಾಂತ್ ಜೊತೆಗೆ ಕನ್ನಡದ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿನ ಶಿವಣ್ಣನ ಪಾತ್ರ ಭಾರಿ ಹಿಟ್ ಆಗಿತ್ತು. ಇದೀಗ ರಜನೀಕಾಂತ್ ಜೊತೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ನಟಿಸಲಿದ್ದಾರೆ.

ರಜನಿಕಾಂತ್​ ನಟಿಸಲಿರುವ ಹೊಸ ಸಿನಿಮಾದಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಪೂರ್ಣ ಪ್ರಮಾಣದ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ಎದುರು ವಿಲನ್ ಪಾತ್ರದಲ್ಲಿ ಉಪೇಂದ್ರ ಅಬ್ಬರಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾನಲ್ಲಿ ರಜನಿಕಾಂತ್ ಬಣ್ಣ ಹಚ್ಚುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ, ರಜನೀಕಾಂತ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನು ಸ್ವತಃ ಅವರೇ ಮಾಧ್ಯಮಗಳ ಬಳಿ ಖಾತ್ರಿಪಡಿಸಿದ್ದಾರೆ. ಅಲ್ಲದೆ, ರಜನೀಕಾಂತ್ ಅಂಥಹಾ ಸೂಪರ್ ಸ್ಟಾರ್ ಹಾಗೂ ಲೋಕೇಶ್ ಕನಗರಾಜ್ ಅಂಥಹಾ ಪ್ರತಿಭಾವಂತರ ಜೊತೆಗೆ ನಟಿಸುತ್ತಿರುವುದು ನನ್ನ ಅದೃಷ್ಟ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ.  

ಅಂದಹಾಗೆ ಉಪೇಂದ್ರಗೆ ಇದು ಎರಡನೇ ತಮಿಳು ಸಿನಿಮಾ. ಈ ಮೊದಲು ಸತ್ಯಂ ಹೆಸರಿನ ತಮಿಳು ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದರು. ಆ ಸಿನಿಮಾದಲ್ಲಿ ವಿಶಾಲ್ ನಾಯಕ. ಉಪೇಂದ್ರ ಈ ಹಿಂದೆ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅವರ ಕಬ್ಜ 2, 45 ಇನ್ನೂ ಕೆಲವು ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮ್ಮ ಜೀವನದ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಪತಿ ನೆನೆದು ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಮುಂದಿನ ಸುದ್ದಿ
Show comments