Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣ, ಮಿಲನಾ ಬಳಿಕ ಚಂದನ್, ಕವಿತಾ ಗೌಡ ಸರದಿ: ಮಗುವಿನ ವಿಚಾರದಲ್ಲಿ ಹೊಸ ಟ್ರೆಂಡ್

Chanda Kavitha baby

Krishnaveni K

ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2024 (11:34 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಬಳಿಕ ಈಗ ಸ್ಯಾಂಡಲ್ ವುಡ್ ನ ಮತ್ತೋರ್ವ ಜೋಡಿ ಚಂದನ್ ಕುಮಾರ್-ಕವಿತಾ ಗೌಡ ಕೂಡಾ ಮಗುವಿನ ವಿಚಾರದಲ್ಲಿ ಹೊಸ ಟ್ರೆಂಡ್ ಶುರು ಮಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ ದಂಪತಿ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಮಗುವಿನ ಪೋಷಕರಾಗಿರುವುದು ಚಂದನ್ ಕುಮಾರ್-ಕವಿತಾ ಗೌಡ ದಂಪತಿ. ಡಾರ್ಲಿಂಗ್ ಕೃಷ್ಣ ದಂಪತಿ ತಮ್ಮ ಮಗಳ ಫೋಟೋವನ್ನು ಒಂದೇ ವಾರಕ್ಕೆ ರಿವೀಲ್ ಮಾಡಿದ್ದರು. ಜೊತೆಗೆ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಇದೀಗ ಚಂದನ್ ದಂಪತಿಯ ಸರದಿ. ಇತ್ತೀಚೆಗಷ್ಟೇ ದಂಪತಿ ಗಂಡು ಮಗುವಿನ ಪೋಷಕರಾಗಿದ್ದರು. ಮಗುವಿನ ಕಾಲುಗಳ ವಿಡಿಯೋ ಪ್ರಕಟಿಸುವ ಮೂಲಕ ಚಂದನ್ ಸಿಹಿ ಸುದ್ದಿ ಪ್ರಕಟಿಸಿದ್ದರು. ಇದೀಗ ದಂಪತಿ ತಮ್ಮ ಮಗನ ಮುಖ ರಿವೀಲ್ ಮಾಡಿದ್ದಾರೆ. ಆ ಮೂಲಕ ಮಗು ಹುಟ್ಟಿದ ಕೆಲವೇ ದಿನಕ್ಕೆ ಫೋಟೋ, ವಿಡಿಯೋ ರಿವೀಲ್ ಮಾಡುವ ಹೊಸ ಟ್ರೆಂಡ್ ಗೆ ಸೇರಿಕೊಂಡಿದ್ದಾರೆ.

ಮಗುವಿನ ಜೊತೆಗೆ ದಂಪತಿ ಇರುವ ಫೋಟೋ ಪ್ರಕಟಿಸಿದ್ದಾರೆ. ಈ ಫೋಟೋ ಪ್ರಕಟವಾಗುತ್ತಿದ್ದಂತೇ ಸಾಕಷ್ಟು ಮಂದಿ ಲೈಕ್ಸ್ ಮಾಡಿದ್ದಾರೆ. ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮಾ ಧಾರವಾಹಿ ಮೂಲಕ ಚಿರಪರಿಚಿತರಾಗಿದ್ದ ಜೋಡಿ ಬಳಿಕ ಮುದ್ದಾದ ಮಗುವನ್ನು ಬರಮಾಡಿಕೊಂಡಿರುವ ಸಂಭ್ರಮದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ಪರಿಶ್ರಮದಿಂದ ಮನೆ ಕಟ್ಟಿದ ಅನುಪಮಾ ಗೌಡ: ಭಾವುಕರಾದ ಗೆಳತಿ ನೇಹಾ ಗೌಡ