Webdunia - Bharat's app for daily news and videos

Install App

ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮತ್ತು ವಾಹಿನಿಗೆ ಲಾಯರ್ ಸಂಘದಿಂದ ಎಚ್ಚರಿಕೆ

Lawyer Jagadish
Krishnaveni K
ಭಾನುವಾರ, 6 ಅಕ್ಟೋಬರ್ 2024 (17:41 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿರುವ ಲಾಯರ್ ಜಗದೀಶ್ ವಿರುದ್ಧ ಈಗ ವಕೀಲರ ಸಂಘ ತಿರುಗಿಬಿದ್ದಿದೆ. ಅವರ ವಿರುದ್ಧ ಕಲರ್ಸ್ ಕನ್ನಡ ವಾಹಿನಿಗೆ ಪತ್ರ ಬರೆದಿದೆ.

ಬಿಗ್ ಬಾಸ್ ಮನೆಯಲ್ಲಿ ನಾನು ಲಾಯರ್. ಮನಸ್ಸು ಮಾಡಿದ್ರೆ ಈ ಕ್ಷಣಕ್ಕೆ ಏನು ಬೇಕಾದರೂ ಮಾಡಬಹುದು ಎಂದು ಸವಾಲು ಹಾಕುತ್ತಿರುವ ನಡುವೆಯೇ ಬಾರ್ ಕೌನ್ಸಿಲ್ ಅವರ ನೋಂದಣಿ ರದ್ದುಗೊಳಿಸಿತ್ತು. ಅವರ ಪ್ರಮಾಣ ಪತ್ರಗಳನ್ನು ಹಿಂದೆ ಪಡೆಯಲು ಸೂಚಿಸಿತ್ತು.

ಇದರ ಬೆನ್ನಲ್ಲೇ ಈಗ ಅವರನ್ನು ಕಿಚ್ಚ ಸುದೀಪ್ ಹಾಗೂ ಕಲರ್ಸ್ ವಾಹಿನಿ ತನ್ನ ಪ್ರೋಮೋಗಳಲ್ಲಿ ವಕೀಲ್ ಸಾಹಬ್, ಲಾಯರ್ ಎಂದು ಸಂಬೋಧಿಸುತ್ತಿರುವುದಕ್ಕೆ ವಕೀಲರ ಸಂಘವು ವಿರೋಧ ವ್ಯಕ್ತಪಡಿಸಿದೆ. ವಕೀಲಿ ವೃತ್ತಿಗೆ ಅದರದ್ದೇ ಆದ ಗೌರವವಿದೆ. ಇಂಥ ಸಂದರ್ಭದಲ್ಲಿ ಅವರ ಹಿನ್ನಲೆಯನ್ನು ಗಮನಿಸದೇ ತಮ್ಮ ವಾಹಿನಿಯಲ್ಲಿ ಅವರನ್ನು ವಕೀಲರು ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲ ವೃಂದಕ್ಕೆ ನೋವುಂಟು ಮಾಡಿದೆ ಎಂದು ಪತ್ರ ಬರೆದಿದೆ.

ಹೀಗಾಗಿ ನಿಮ್ಮ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜಗದೀಶ್ ಅವರನ್ನು ವಕೀಲರು ಎಂದು ಬಿಂಬಿಸಬಾರದು ಎಂದು ವಕೀಲರ ಸಂಘ ಪತ್ರ ಬರೆದು ವಾಹಿನಿಗೆ ಸೂಚನೆ ನೀಡಿದೆ. ಈ ವಿಚಾರವನ್ನು ನೀವು ಮತ್ತು ಬಿಗ್ ಬಾಸ್ ಸ್ಪರ್ಧಿಗಳಿಗೂ ಮನವರಿಕೆ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಕೀಲಿ ಸಂಘ ಎಚ್ಚರಿಕೆ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments