Select Your Language

Notifications

webdunia
webdunia
webdunia
webdunia

ಮದುವೆಯಾದ ಎರಡೇ ದಿನಕ್ಕೆ ಅದಿತಿ ಪ್ರಭುದೇವ ಪತಿಗೆ ಇದೆಂಥಾ ಶಾಕ್?!

ಮದುವೆಯಾದ ಎರಡೇ ದಿನಕ್ಕೆ ಅದಿತಿ ಪ್ರಭುದೇವ ಪತಿಗೆ ಇದೆಂಥಾ ಶಾಕ್?!
ಬೆಂಗಳೂರು , ಗುರುವಾರ, 1 ಡಿಸೆಂಬರ್ 2022 (08:30 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ-ಯಶಸ್‍ ಪಾಟ್ಲಾ ಸೋಮವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದಿತಿ ಕೈ ಹಿಡಿದ ಮೇಲೆ ಉದ್ಯಮಿಯಾಗಿರುವ ಯಶಸ್ ಕೂಡಾ ಸೆಲೆಬ್ರಿಟಿ ಆಗಿದ್ದಾರೆ.

ಹೀಗಾಗಿ ಯಶಸ್ ಸೋಷಿಯಲ್ ಮೀಡಿಯಾವನ್ನು ಎಷ್ಟೋ ಜನ ಕುತೂಹಲದಿಂದ ಕ್ಲಿಕ್ ಮಾಡುತ್ತಿದ್ದಾರೆ. ಆದರೆ ಈ ನಡುವೆ ಯಾರೋ ಕಿಡಿಗೇಡಿಗಳು ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ.

ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಯಶಸ್, ನನ್ನ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗಿವೆ. ನನ್ನ ಖಾತೆಯಿಂದ ಯಾವುದೇ ಮೆಸೇಜ್ ಬಂದರೂ ಪರಿಗಣಿಸಬೇಡಿ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪ್ಪಿ ಕಬ್ಜದಲ್ಲಿ ಸನ್ನಿ ಲಿಯೋನ್?