Webdunia - Bharat's app for daily news and videos

Install App

ನಾಲ್ಕನೇ ಮದುವೆ ತಯಾರಿಯಲ್ಲಿ ನಟಿ ವನಿತಾ ವಿಜಯ್ ಕುಮಾರ್‌, ಹುಡುಗ ಯಾರು ಗೊತ್ತಾ

ನಾಲ್ಕನೇ ಮದುವೆ ತಯಾರಿಯಲ್ಲಿ ನಟಿ ವನಿತಾ ವಿಜಯ್ ಕುಮಾರ್‌  ಹುಡುಗ ಯಾರು ಗೊತ್ತಾ
Sampriya
ಮಂಗಳವಾರ, 1 ಅಕ್ಟೋಬರ್ 2024 (18:46 IST)
Photo Courtesy X
ಯಾವಾಗಲು ಒಂದಲ್ಲ ಒಂದು ಸುದ್ದಿಯಲ್ಲಿರುವ ನಟಿ ವನಿತಾ ವಿಜಯ್ ಕುಮಾರ್ ಅವರು ಇದೀಗ ನಾಲ್ಕನೇ ಮದುವೆಗೆ ಸಜ್ಜಾಗಿದ್ದಾರೆ.

43ವರ್ಷ ವಯಸ್ಸಿನ ವಿಜಯ್ ಕುಮಾರ್ ಅವರಿಗೆ ಈಗಾಗಲೇ ಮೂರು ಮದುವೆಯಾಗಿ ವಿಚ್ಛೇಧನ ಪಡೆದಿದ್ದಾರೆ.
ಹಳೆ ಗೆಳೆಯ ರಾಬರ್ಟ್‌ಗೆ ವನಿತಾ ಅವರು ಮಂಡಿಯೂರಿ ಪ್ರಪೋಸ್ ಮಾಡಿದ್ದು, ಈ ಫೋಟೋವನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ.

ಕಡಲ ತೀರದಲ್ಲಿ ವನಿತಾ ವಿಜಯ್​ಕುಮಾರ್​ ಅವರು ಮಂಡಿಯೂರಿ ಪ್ರಪೋಸ್​ ಮಾಡಿದ್ದಾರೆ. ಈ ಫೋಟೋದಲ್ಲಿ ರಾಬರ್ಟ್​ ಅವರು ನಗು ಬೀರಿದ್ದಾರೆ. 'ದಿನಾಂಕ ನೆನಪಿಟ್ಟುಕೊಳ್ಳಿ. 5 ಅಕ್ಟೋಬರ್​ 2024. ವನಿತಾ ವಿಜಯ್​ ಕುಮಾರ್​ ಲವ್ಸ್​ ರಾಬರ್ಟ್' ಎಂದು ಬರೆದುಕೊಂಡಿದ್ದಾರೆ.

ವನಿತಾ ವಿಜಯ್​ಕುಮಾರ್​ ಅವರು 2000ನೇ ಇಸವಿಯಲ್ಲಿ ಮೊದಲ ಮದುವೆ ಆಗಿದ್ದರು. 7ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ ವನಿತಾ ಅವರು 2007ರಲ್ಲಿ ರಾಜನ್ ಆನಂದ್ ಎಂಬವರ ಜತೆ ಎರಡನೇ ಮದುವೆಯಾದರು.  ಆ ವಿವಾಹ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. 2012ರಲ್ಲಿ ಈ ಮದುವೆ ಕೂಡ ಮುರಿದುಬಿತ್ತು. 2020ರಲ್ಲಿ ಪೀಟರ್​ ಪೌಲ್​ ಜೊತೆ ವನಿತಾ ಅವರು 3ನೇ ಮದುವೆಯಾದರು. ಆದರೆ ಈ ದಾಂಪತ್ಯ ಜೀವನ ಕೂಡಾ ಹೆಚ್ಚು ದಿನ ಸಾಗಲಿಲ್ಲ. ಇದೀಗ ಕೋರಿಯೋಗ್ರಾಫರ್ ರಾಬರ್ಟ್ ಜತೆ ವನಿತಾ ಅವರು ಇದೇ 5ರಂದು ಮದುವೆಯಾಗುವ ಸಾಧ್ಯತೆಯಿದೆ. ಇದು ಪ್ರಚಾರದ ಗಿಮಿಕ್​ ಕೂಡ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments