ಸಹೋದರ ದೀಪಕ್ ನನ್ನು ಕಳೆದುಕೊಂಡ ಕಷ್ಟದಲ್ಲೂ ಅಮೂಲ್ಯಗೆ ಜೊತೆಯಾದ ನಟಿ ವೈಷ್ಣವಿ ಗೌಡ

Krishnaveni K
ಶುಕ್ರವಾರ, 18 ಅಕ್ಟೋಬರ್ 2024 (14:11 IST)
Photo Credit: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಸಹೋದರ ದೀಪಕ್ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ.  ಸಹೋದರನ ಸಾವು ಅಮೂಲ್ಯರನ್ನು ತೀರಾ ಕುಗ್ಗಿಸಿದೆ. ಈ ಸಂದರ್ಭದಲ್ಲಿ ಅವರಿಗೆ ಪ್ರಾಣ ಸ್ನೇಹಿತೆ ವೈಷ್ಣವಿ ಸಾಥ್ ನೀಡಿದ್ದಾರೆ.

ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಮತ್ತು ಅಮೂಲ್ಯ ಕಾಲೇಜು ದಿನಗಳಿಂದಲೂ ಸ್ನೇಹಿತರು. ಅವರ ಸ್ನೇಹ ಇಂದಿಗೂ ಅಷ್ಟೇ ಗಟ್ಟಿಯಾಗಿದೆ. ಅಮೂಲ್ಯ ಮನೆಯ ಎಲ್ಲಾ ಖುಷಿಯ ಕ್ಷಣಗಳಲ್ಲೂ ವೈಷ್ಣವಿ ಮನೆ ಮಗಳಂತೇ ಇದ್ದರು. ಇದೀಗ ಕಷ್ಟದ ಸಂದರ್ಭದಲ್ಲೂ ಗೆಳತಿಗೆ ಸಮಾಧಾನ ಮಾಡಲು ಬಂದಿದ್ದಾರೆ.

ಅಮೂಲ್ಯ ಸಹೋದರ ದೀಪಕ್ ನಿರ್ದೇಶಕನಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಈಗ ಕಿಡ್ನಿ ವೈಫಲ್ಯದಿಂದಾಗಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಸಹೋದರನ ಸಾವು ಅಮೂಲ್ಯರನ್ನು ಶಾಕ್ ಗೆ ದೂಡಿದೆ. ಅಣ್ಣನ ಕಳೇಬರದ ಮುಂದೆ ದಿಕ್ಕೆಟ್ಟು ಕೂತಿದ್ದ ಅವರನ್ನು ಸ್ನೇಹಿತೆ ವೈಷ್ಣವಿ ಬಿಗಿದಪ್ಪಿ ಸಾಂತ್ವನ ಹೇಳಿದ್ದಾರೆ.

ದುಃಖದಲ್ಲಿ ನಿಂತಿದ್ದ ಅಮೂಲ್ಯ ಜೊತೆಗೇ ನಿಂತಿದ್ದ ವೈಷ್ಣವಿ ಸಾಂತ್ವನ ಹೇಳುತ್ತಲೇ ಇದ್ದರು. ಈ ನಡುವೆ ಅಮೂಲ್ಯ  ಮನೆಯವರಿಗೂ ವೈಷ್ಣವಿ ಹಾಗೂ ಅವರ ಮತ್ತೊಬ್ಬ ಸ್ನೇಹಿತೆ ಧೈರ್ಯ ಹೇಳುವ ಪ್ರಯತ್ನ ಮಾಡಿದರು. ಇವರನ್ನು ನೋಡಿದರೆ ಸ್ನೇಹಿತರು ಎಂದರೆ ಹೀಗಿರಬೇಕು ಎಂದಿದ್ದಾರೆ ಅಭಿಮಾನಿಗಳು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments